Kannada NewsKarnataka News

ಪ್ರೇಮಿಗಳನ್ನು ಸುಲಿಗೆ ಮಾಡಿ ಪರಾರಿಯಾದ ಖದೀಮರು ಬಲೆಗೆ?

ಪ್ರಗತಿವಾಹಿನಿ ಸುದ್ದಿ, ಅಗಸಗಿ: ತಾಲೂಕಿನ ಕಾಕತಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ವಿಹರಿಸಲು ಬರುತ್ತಿದ್ದ ಪ್ರೇಮಿಗಳನ್ನು ಬೆನ್ನಟ್ಟಿ ಹೆದರಿಸಿ ಅವರ ಬಳಿಯಿದ್ದ ಹಣ, ಚಿನ್ನ ಮತ್ತು ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೊಚಿ ಪರಾರಿಯಾಗುತ್ತಿದ್ದ ಗುಂಪೊದಕ್ಕೆ ಕಾಕತಿ ಪೋಲಿಸರು ಬುಧವಾರ ಗಾಳ ಹಾಕಿದ್ದು, ಕಳ್ಳರ ಸುಳಿವು ಸಿಕ್ಕಿರುವುದಾಗಿ ತಿಳಿದು ಬಂದಿದೆ.
ಭಾನುವಾರ ಸಾಯಂಕಾಲ 7 ಗಂಟೆ ಸುಮಾರಿಗೆ ನಗರದ ಹೊರವಲಯ ಬೆನ್ನಾಳಿ ಗ್ರಾಮದ ಹತ್ತಿರವಿರುವ ಬಯಲು ಪ್ರದೇಶಕ್ಕೆ  ಪ್ರೇಮಿಗಳಿಬ್ಬರು ವಿಹರಿಸಲು ಬಂದಿದ್ದರು. ಆಗ ಇವರನ್ನು ಕಂಡು ಬೆನ್ನಟ್ಟಿದ ಕದಿಮರ ಗುಂಪೊಂದು ಅಡ್ಡಗಟ್ಟಿ ಮನಬದಂತೆ ಥಳಿಸಿ ಅವರ ಬಳಿಯಿದ್ದ  ಹಣ, ಚೈನ್, ಕಿವಿಯೋಲೆ, ಉಂಗುರ, ಮೂಗುತಿ ಸೇರಿದಂತೆ  ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾಗಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಕಾಕತಿ ಪೋಲಿಸರು ಖದಿಮರಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಈ ಹಿಂದೆ ಇವರು ಅನೇಕ ಬಾರಿ ಇಂತಹ ಕೃತ್ಯಗಳನ್ನು ನಡೆಸಿದ್ದಾರೆಂದು ಬಲ್ಲ ಮೂಲಗಳಿಂದ  ತಿಳಿದು ಬಂದಿದೆ.
ಇದೆ ರೀತಿ ಅನೇಕ ಪ್ರಕರಣಗಳು ಈ ವ್ಯಾಪ್ತಿಯಲ್ಲಿ ನಡೆದಿದ್ದು ಎಲ್ಲ  ಪೀಡಿತರು ಪ್ರೇಮಿಗಳು ಮತ್ತು ಅನೈತಿಕ ಸಂಬಂಧ ಹೊಂದಿದವರೆ ಆದ ಕಾರಣ ಪ್ರಕರಣಗಳು ದಾಖಲಾಗಿಲ್ಲ.
ಭಾನುವಾರ ಸಾಯಂಕಾಲ ಸುಮಾರು 9 ಗಂಟೆಗೆ ಯುವಕ ಮತ್ತು ಅವನ ಜೊತೆಯಿದ್ದ ಯುವತಿ ಹೋಗುತ್ತಿದ್ದ ವಾಹನಕ್ಕೆ ಅಡ್ಡಲಾಗಿ ಬಂದು ಸಹಾಯ ಕೇಳಿದ್ದಾರೆ. ಆಗ ವಾಹನದಲ್ಲಿದ್ದ ವ್ಯಕ್ತಿಗಳು ಇವರನ್ನು ಕರೆದುಕೊಂಡು ಹೋಗಿ ಸಮಾಧಾನಪಡಿಸಿ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದು ಪೊಲೀಸ್ ಠಾಣೆಗೆ  ದೂರು ದಾಖಲಿಸುವಂತೆ ಹೆಳಿದ್ದರು.
ಆದರೆ ಪ್ರೇಮಿಗಳಾದ ಕಾರಣ ಪ್ರಕರಣ ದಾಖಲಿಸದೆ ಹೋಗಿದ್ದರು. ಮರುದಿನ ಕಾಕತಿ ಪಿಐ ಶ್ರೀಶೈಲ ಕೌಜಲಗಿ ಅವರಿಗೆ ಸೂಕ್ಷ್ಮವಾಗಿ ತಿಳಿಸಿದ್ದ ಆ ಸಹಾಯ ಮಾಡಿದವರು ಇಂತಹ ಪ್ರಕರಣಗಳು ಆಗಾಗ ನಡೆಯುತ್ತಿದ್ದು ಕಡಿವಾಣ ಹಾಕುವಂತೆ ಮನವಿ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ  ಕಾಕತಿ ಪಿಐ ಘಟನೆ ನಡೆದ ಸ್ಥಳದ ಸಿಸಿಟಿವಿ ವಿಡಿಯೋಗಳನ್ನು ಪರಿಶೀಲನೆ  ನಡೆಸಿ ಒಬ್ಬನನ್ನು ವಶಕ್ಕೆ ಪಡೆದು ಉಳಿದವರಿಗಾಗಿ  ಶೋಧ ನಡೆಸಿದ್ದಾರೆಂದು ತಿಳಿದು ಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button