ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏಷ್ಯಾದ ಅತಿದೊಡ್ಡ ಏರ್ ಶೋ ಏರೋ ಇಂಡಿಯಾ-2025 ವೈಮಾನಿಕ ಪ್ರದರ್ಶ ಆರಂಭವಾಗಿದ್ದು, ಇಂದಿನಿಂದ ಐದು ದಿನಗಳ ಕಾಲ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ ಕಣ್ಮನ ಸೆಳೆಯಲಿದೆ.
ಏರ್ ಶೋ ಭದ್ರತೆಗಾಗಿ ನೀಯೋಜಿಸಿದ್ದ ಪೊಲೀಸ್ ಸಿಬ್ಬಂದಿಗಳಿಗೆ ನೀಡಿರುವ ಆಹಾರದಲ್ಲಿ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿಲ್ಲ ಎಂಬುದಕ್ಕೆ ಇಂದು ನಡೆದ ಮತ್ತೊಂದು ಘಟನೆ ಪುಷ್ಠಿ ನೀಡಿದೆ.
ಏರ್ ಶೋ ಭದ್ರತೆಗೆ ಬಂದಿದ್ದ ಪೊಲೀಸ್ ಸಿಬ್ಬಂದಿಗೆ ಊಟದ ಜೊತೆ ನೀಡಿದ್ದ ಸಿಹಿ ತಿನಿಸಿನಲ್ಲಿ ಇಂದು ಹುಳ ಪತ್ತೆಯಾಗಿದೆ. ನಿನ್ನೆ ನೀಡಿದ್ದ ಊಟದಲ್ಲಿ ಜಿರಳೆ ಪತ್ತೆಯಾಗಿತ್ತು. ಈ ಘತನೆ ಬೆನ್ನಲ್ಲೇ ಕಮಿಷ್ನರ್ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು ಎಂದು ಸೂಚಿಸಿದ್ದರು.
ಆದಾಗ್ಯೂ ಇಂದು ಪೊಲೀಸ್ ಸಿಬಂದಿಗಳಿಗೆ ನೀಡಲಾಗಿದ್ದ ಊಟದಲ್ಲಿಯೂ ಹುಳ ಪತ್ತೆಯಾಗಿದ್ದು, ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ