Belagavi NewsBelgaum NewsPolitics

*ಕಾಂಗ್ರೆಸ್ ಪಕ್ಷದ ಬಲ ವರ್ಧನೆಗೆ ನಿರಂತರ ಶ್ರಮ: ರಾಹುಲ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಕ್ಷ ಜವಾಬ್ದಾರಿ ‌ಸ್ಥಾನ ನೀಡಿದೆ, ಹೀಗಾಗಿ ಹೋರಾಟದೊಂದಿಗೆ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಬಲ ವರ್ಧನೆಗೆ ನಿರಂತರ ಶ್ರಮಿಸಲಾಗವುದು ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಮತದಾರರ ಆಶೀರ್ವಾದದಿಂದ ಸುಮಾರು 1 ಲಕ್ಷ 20 ಮತಗಳು ಬಂದಿದೆ. ಮತದಾರರ ಹಾಗೂ ಯುವಕರ ಬೆಂಬಲವೇ ಪಕ್ಷದಲ್ಲಿ ಕೆಲಸ ಮಾಡಲು ಶಕ್ತಿ ನೀಡಿದೆ. ಪಕ್ಷ ಸಂಘಟನೆ ಸೇರಿದಂತೆ ಯುವಕರ ಯೋಜನೆಯನ್ನು ಯುವಕರಿಗೆ ತಲುಪಿಸಲು ಪ್ರಯತ್ನ ಮೀರಿ ಕೆಲಸ ಮಾಡಲಾಗುವುದು ಎಂದರು.

Home add -Advt

ಪಕ್ಷಕ್ಕೆ ಯುವಕರ ಅಗತ್ಯವಿದೆ. ಹೀಗಾಗಿ ಹೆಚ್ಚೆಚ್ಚು ಯುವಕರು ಕಾಂಗ್ರೆಸ್ ಗೆ ಸೇರಬೇಕು. ತಂದೆಯವರ ಮಾರ್ಗದರ್ಶನದಲ್ಲಿ ಪಕ್ಷದ ಸಂಘಟನೆಗೆ ಕಟ್ಟಲು ಮುಂದು ವರೆಯಲಾಗುವುದು. ಯಾವುದೇ ಸ್ಪರ್ಧೆ ಬಗ್ಗೆ ಚರ್ಚೆ ಆಗಿಲ್ಲ. ಸಚಿವರ ಸೂಚನೆಯಂತೆ ಕಾರ್ಯಕ್ರಮ ಆಯೋಜನೆ ಮಾಡಲಾವುದು. ಇನ್ನೂ ಕ್ಷೇತ್ರದ ಆಯ್ಕೆ ಯಾವುದೇ ಚರ್ಚೆ ಇಲ್ಲ, ಮತದಾರರ ಜನರ ವಿಶ್ವಾಸ ಗಳಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯುವಕರು ಕೈ ಜೋಡಿಸದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಗೆ ಬಹುಮತ ಇದೆ. ಆದರೆ, ಮುಂದಿನ ‌ದಿನಗಳ ವಿವಿಧ ರಾಜ್ಯಗಳಲ್ಲಿ ಪಕ್ಷ ಸಂಘಟನೆಗೆ ಹಗಲಿರುಳು ಶ್ರಮಿಸಲಾಗವುದು.


ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಲು ಕಾಂಗ್ರೆಸ್ ಎಲ್ಲಾ ಪಕ್ಷದ ಮುಖಂಡರು ಪ್ರತಿ ಬೂತ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಕಟ್ಟಿ ಬೆಳೆಸಬೇಕು, ಯುವಕರು ರಾಜ್ಯಾದ್ಯಂತ ಪ್ರವಾಸ ಕೈಗೊಂಡರು ಪಕ್ಷಕ್ಕೆ ಶಕ್ತಿ ತುಂಬಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಯುವಕರ ಸಮಾವೇಶ ಆಯೋಜಿಸುವ ಕುರಿತು ಚರ್ಚೆ ನಡೆಯುತ್ತಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ದಿನಗಳ ರಾಜ್ಯಾದ್ಯಂತ ಪ್ರವಾಸಿ ನಡಸಿ, ಪ್ರಮುಖ ಕ್ಷೇತ್ರ ಸೇರಿದಂತೆ ಯುವಕರ ಸಂಘಟನೆಯೊಂದಿಗೆ ಸಮಾವೇಶ ಆಯೋಜಿಸುವ ಚರ್ಚಿಸಲಾಗುವುದು ಎಂದು ಹೇಳಿದರು.

Related Articles

Back to top button