ಪ್ರಗತಿ ವಾಹಿನಿ, ಕಾರವಾರ: ಒಂದುವರೆ ಲಕ್ಷ ರೂ ಮೌಲ್ಯದ ಅಕ್ರಮ ಗೋವಾ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ 5 ಲಕ್ಷ ರೂಪಾಯಿ ಮೌಲ್ಯದ ಹುಂಡೈ ವೆರ್ನಾ ಕಾರನ್ನು ಕಾರವಾರ ಪೊಲೀಸರು ಸದಾಶಿವಗಡ ದೇವಭಾಗ ಕ್ರಾಸ್ ಬಳಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಎಸ್ ಪಿ ಡಾ. ಸುಮನ ಪೇನ್ನೇಕರ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪಿಐ ಪ್ರೇಮನಗೌಡ ಪಾಟೀಲ್ ಸಿಬ್ಬಂದಿಯಾದ ರಾಘವೇಂದ್ರ, ಭಗವಾನ ಗಾಂವಕರ, ಸಂತೋಷ್ ಕುಮಾರ್, ಮಹದೇವ ಸಿದ್ದಿ ರವರ ತಂಡವು ನಿಖರ ಮಾಹಿತಿಯ ಮೇರೆಗೆ ಗೋವಾ ರಾಜ್ಯದಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರವಾರದ ಕಡೆಗೆ ಬರುತ್ತಿದ್ದ ಹುಂಡೈ ವೇರ್ನಾ ಕಾರನ್ನು ಸದಾಶಿವಗಡದ ದೇವಭಾಗ ಕ್ರಾಸನಲ್ಲಿ ಪೊಲೀಸ್ ಬ್ಯಾರಿಕೇಟ್ ಹತ್ತಿರ ತಡೆಯಲು ಯತ್ನಿಸಿದ್ದಾರೆ.
ಕಾರನ್ನು ಹಿಂದೆಯೇ ನಿಲ್ಲಿಸಿದ ಚಾಲಕ ಇಳಿದು ಓಡಿ ಹೋಗಿದ್ದಾನೆ. ಕಾರನ್ನು ವಶಕ್ಕೆ ಪಡೆದು ಪರಿಶೀಲಿಸಲು 27 ಪಾಲಿತಿನ್ ಚೀಲಗಳಲ್ಲಿ 770 ಲೀಟರ್ ಸಾರಾಯಿ ಬಾಟಲಿಗಳಿದ್ದು ಸುಮಾರು ಒಂದುವರೆ ಲಕ್ಷ ಮೌಲ್ಯದ ಗೋವಾ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಮದ್ಯವನ್ನು ಜಫ್ತುಪಡಿಸಿಕೊಂಡು, ಚಿತ್ತಾಕುಲ ಪೊಲೀಸ್ ರಾಣಿಯಲ್ಲಿ ಕರ್ನಾಟಕ ಅಬಕಾರಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿತನ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ವಿದ್ಯಾರ್ಥಿ ನಿಗೂಢವಾಗಿ ನಾಪತ್ತೆ; ಮುಖ್ಯಶಿಕ್ಷಕ ಸಸ್ಪೆಂಡ್
https://pragati.taskdun.com/latest/morarji-desai-schoolstudentmissingteacher-suspendedmandya/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ