Kannada NewsKarnataka NewsLatest

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಎಸಿಬಿ ಬಲೆಗೆ; ಇಬ್ಬರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪಾನ್ ಮಸಾಲಾ, ಸೆಂಟೆಂಡ್ ಸುಪಾರಿ ಮತ್ತು ತಂಬಾಕು ಪ್ಯಾಕ್ಟರಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕನ್ಸೆಂಟ್ ಫಾರ್ ಆಪರೇಷನ್ (ಸಿಎಫ್‌ಓ) ನೇದ್ದರ ಅನುಮತಿಗಾಗಿ 30 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.

ದಿನಾಂಕ: ೧೩.೦೫.೨೦೨೨ ರಂದು ಫಿರ‍್ಯಾದಿ  ರಾಜು ಲಕ್ಷ್ಮಣ ಪಾಶ್ಚಾಪೂರೆ (ಸಾಃಉತ್ತಮ ಟಾಕೀಜ್ ಹಿಂದೆ ಹಳೆ ಚಂದೂರ ರಸ್ತೆ ಇಚಲಕರಂಜಿ ಜಿಃಕೊಲ್ಹಾಪೂರ)  ಎಸಿಬಿ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಫಿರ‍್ಯಾದಿ ನೀಡಿದ್ದರು.

Home add -Advt

ಒಂದು ವರ್ಷದಿಂದ ಚಿಕ್ಕೋಡಿ ತಾಲೂಕಿನ ಬೋರಗಾಂವದಲ್ಲಿ ಆರ್‌ಪಿ ಪ್ರೊಡಕ್ಷನ್ ಎಂಬ ಹೆಸರಿನಿಂದ ಪಾನ್ ಮಸಾಲಾ, ಸೆಂಟೆಂಡ್ ಸುಪಾರಿ ಮತ್ತು ತಂಬಾಕು ಪ್ಯಾಕ್ಟರಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕನ್ಸೆಂಟ್ ಫಾರ್ ಆಪರೇಷನ್ (ಸಿಎಫ್‌ಓ) ನೇದ್ದರ ಅನುಮತಿಗೆ ಪ್ರಯತ್ನಿಸುತ್ತಿದ್ದರು.

ಈ ಕುರಿತು  ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಿ ಈ ಅನುಮತಿಗಾಗಿ ಚಿಕ್ಕೋಡಿಯಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿರುವ ಅಧಿಕಾರಿಗಳನ್ನು ಭೇಟಿಯಾದಾಗ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ರೂ.೩೦,೦೦೦/-ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಬಿ.ಎಸ್. ನೇಮಗೌಡ, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಉತ್ತರ ವಲಯ, ಬೆಳಗಾವಿ ರವರ ಮಾರ್ಗದರ್ಶನದಲ್ಲಿ ಪಿರ್ಯಾದಿಯವರು ಈ ಬಗ್ಗೆ ನೀಡಿದ ದೂರನ್ನು  ಮಹಾಂತೇಶ ಎಸ್.ಜಿದ್ದಿ, ಪೊಲೀಸ್ ಉಪಾಧೀಕ್ಷಕರವರು ದಾಖಲಿಸಿಕೊಂಡಿದ್ದರು. ನಿರಂಜನ್ ಎಂ. ಪಾಟೀಲ್, ಪೊಲೀಸ್ ನಿರೀಕ್ಷಕರು ಹಾಗೂ  ಅಲಿ ಶೇಖ್, ಪೊಲೀಸ್ ನಿರೀಕ್ಷಕರು, ಧಾರವಾಡ ಹಾಗೂ ಬೆಳಗಾವಿ ಭ್ರಷ್ಟಾಚಾರ ದಳ ಪೊಲೀಸ್ ಠಾಣೆಗಳ ಸಿಬ್ಬಂದಿ ಕಾರ್ಯಚರಣೆ ನಡೆಸಿದರು.

ದಿನಾಂಕ:೧೬.೦೫.೨೦೨೨ ರಂದು ವಿಜಯಕುಮಾರ ಶಾಂತಪ್ಪ ಶೆಂಡುರಿ ಕ್ಷೇತ್ರ ಸಹಾಯಕ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಚಿಕ್ಕೋಡಿ  ಇವರು ಪ್ರದೀಪ ಸೂರ್ಯಕಾಂತ ಮಮದಾಪೂರ ಉಪ-ಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಚಿಕ್ಕೋಡಿ ಇವರ ಸೂಚನೆಯ ಮೇರೆಗೆ ರೂ.೩೦,೦೦೦/-ಗಳ ಲಂಚದ ಹಣವನ್ನು ಫಿರ‍್ಯಾದಿಯಿಂದ ಸ್ವೀಕರಿಸುವ ಸಂದರ್ಭದಲ್ಲಿ ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದು, ಆಪಾದಿತರನ್ನು ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಮಾನವೀಯ ಮೌಲ್ಯಗಳ ಅಮೂಲ್ಯ ಗ್ರಂಥ ಭಗವದ್ಘೀತೆ: ಸಿಎಂ ಬೊಮ್ಮಾಯಿ

Related Articles

Back to top button