ಪೋರ್ಷೆ ಕಾರು ಅಪಘಾತ ಪ್ರಕರಣ: ಕುಡಿದು ಕಾರ್ ಚಲಾಯಿಸಿರುವುದಾಗಿ ತಪ್ಪೊಪ್ಪಿಕೊಂಡ ಅಪ್ರಾಪ್ತ

ಪ್ರಗತಿವಾಹಿನಿ ಸುದ್ದಿ: ದೇಶದಲ್ಲೇ ಸದ್ದು ಮಾಡಿದ ಪುಣೆಯ ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ ಸಾಕಷ್ಟು ಸರ್ಕಸ್ ಆದ ಬಳಿಕ ಕೊನೆಗೂ ಆರೋಪಿ ತಾನು ಕುಡಿದು ವಾಹನ ಚಲಾಯಿಸಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಮೇ 19 ರಂದು ಕಲ್ಯಾಣಿ ನಗರದಲ್ಲಿ ಅಪ್ರಾಪ್ತ ಐಷಾರಾಮಿ ಪೋರ್ಷೆ ಕಾರನ್ನು ಚಲಾಯಿಸಿ ಇಬ್ಬರು ಐಟಿ ಉದ್ಯೋಗಿಗಳ ಸಾವಿಗೆ ಕಾರಣವಾಗಿತ್ತು. ತಾನು ಕುಡಿದು ಕಾರ್ ಚಾಲನೆ ಮಾಡುತ್ತಿದ್ದೆ ಎಂದು 17 ವರ್ಷದ ಆರೋಪಿ ಇದೀಗ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ವಿಚಾರಣೆ ವೇಳೆ ಅಪ್ರಾಪ್ತ ತನಗೆ ಅಂದು ನಡೆದ ಎಲ್ಲಾ ಘಟನೆಗಳು ಎಲ್ಲವು ನೆನಪಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾನೆ. ಈ ನಡುವೆ ಪುಣೆ ನ್ಯಾಯಾಲಯ ಭಾನುವಾರ 17 ವರ್ಷದ ಬಾಲಕನ ಪೋಷಕರಾದ ಶಿವಾನಿ ಅಗರ್ವಾಲ್ ಮತ್ತು ವಿಶಾಲ್ ಅಗರ್ವಾಲ್ ಅವರನ್ನು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜೂನ್ 5 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ರಕ್ತದ ಮಾದರಿಯನ್ನು ಬದಲಿಸಿದ ಆರೋಪ ಅವರ ಮೇಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ