
ಪ್ರಗತಿವಾಹಿನಿ ಸುದ್ದಿ: ಪೋಥಿಸ್ ಬಟ್ಟೆ ಶೋ ರೂಂ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪೋಥಿಸ್ ಬಟ್ಟೆ ಶೋರೂಂ ಮೇಲೆ 20ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಗಾಂಧಿನಗರದಲ್ಲಿರುವ ಪೋಥೀಸ್ ಶೋ ರೂಂ ಮೇಲೂ ಐಟಿ ದಾಳಿ ನಡೆದಿದೆ. ಇಲ್ಲಿ ೩೦ಅಥಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ವಿವಿಧೆಡೆ ಇರಿವ ಪೋಥಿಸ್ ಬಟ್ಟೆ ಮಳಿಗೆ ಮೇಲೆ ದಾಳಿ ನಡೆದಿದೆ. ಪೋಥಿಸ್ ಬಟ್ಟೆ ಶೋ ರೂಮ್ ತಮಿಳುನಾಡು ಮೂಲದ ಉದ್ಯಮಿಯದ್ದಾಗಿದೆ. ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿದ್ದು, ಚೆನ್ನೈನಿಂದ ಬಂದಿರುವ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.