ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ೩೩/೧೧ಕೆವ್ಹಿ ಆರ್. ಎಮ್-೧ ಉದ್ಯಮಬಾಗ ಉಪ ಕೇಂದ್ರಲ್ಲಿ ತುರ್ತು ದುರಸ್ತಿ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಸದರಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಬೆಳಗಾವಿ ನಗರ ವಿವಿಧ ಪ್ರದೇಶಗಳಲ್ಲಿ ಭಾನುವಾರ (ಜು.೩೦) ೨೦೨೩ ರಂದು ಮುಂಜಾನೆ ೧೦ ಗಂಟೆಯಿಂದ ಸಾಯಂಕಾಲ ೫ ಘಂಟೆಯ ವರೆಗೆ ವಿದ್ಯುತ್ ವ್ಯತ್ಯಯಾಗಲಿದೆ.
ಎಫ್-೨ ಉದ್ಯಮಬಾಗ ವ್ಯಾಪ್ತಿಯ ಗಜಾನನ ನಗರ, ಖಾನಾಪುರ ರಸ್ತೆ, ಗಾವಡೆ ಲೇಔಟ್, ಕೆ.ಎಲ್.ಇ. ಕಾಲೇಜ ರಸ್ತೆ ಮತ್ತು ಸದರಿ ಪೀಡರ್ ಮೇಲೆ ಬರುವ ಎಲ್ಲಾ ಪ್ರದೇಶಗಳು, ಎಫ್-೩ ಆರ್,ಪಿ,ಡಿ ವ್ಯಾಪ್ತಿಯ ಖಾನಾಪುರ ರಸ್ತೆ, ೩ನೇ ಗೇಟ್, ಎಸ್.ವಿ.ಕಾಲೋನಿ, ಚಿದಂಬರ ನಗರ, ಮೃತ್ಯುಂಜಯ ನಗರ ಮತ್ತು ಸದರಿ ಪೀಡರ್ ಮೇಲೆ ಬರುವ ಎಲ್ಲಾ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯಾಗಲಿದೆ.
ಅದೇ ರೀತಿಯಲ್ಲಿ ಎಫ್-೫ ಕೆ.ಎಲ್.ಇ ವ್ಯಾಪ್ತಿಯ ಟೈನಿ ಇಂಡಸ್ಟ್ರೀಯಲ್ ಎರಿಯಾ, ರೋಹಿದಾಸ ಕಾಲೋನಿ, ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ ಮತ್ತು ಸದರಿ ಪೀಡರ ಮೇಲೆ ಬರುವ ಎಲ್ಲಾ ಪ್ರದೇಶಗಳು, ಎಫ್-೭ ಮಜಗಾಂವ ವ್ಯಾಪ್ತಿಯ ಮಜಗಾಂವ, ಮಜಗಾಂವ ಇಂಡಸ್ಟ್ರೀಯಲ್ ಎರಿಯಾ, ಬ್ರಹ್ಮ ನಗರ. ಮತ್ತು ಸದರಿ ಪೀಡರ ಮೇಲೆ ಬರುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಾಗಲಿದೆ.
ಅದೇ ರೀತಿಯಲ್ಲಿ ಎಫ್-೮ ಹುಲಿಯಾರ ವ್ಯಾಪ್ತಿಯ ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ ಮತ್ತು ಸದರಿ ಪೀಡರ ಮೇಲೆ ಬರುವ ಎಲ್ಲಾ ಪ್ರದೇಶಗಳು, ಎಫ್-೯ ಫಡಕೆ ವ್ಯಾಪ್ತಿಯ ಜೈನ್ ಇಂಜಿನಿಯರಿಂಗ್ ಕಾಲೇಜ, ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ ಮತ್ತು ಸದರಿ ಪೀಡರ ಮೇಲೆ ಬರುವ ಎಲ್ಲಾ ಪ್ರದೇಶಗಳು ಹಾಗೂ ಎಫ್-೬ ಉದ್ಯಮಬಾಗ-೨ ವ್ಯಾಪ್ತಿಯ ಬಡಮಂಜಿಮಾಳ, ಉದ್ಯಮಬಾಗ ಇಂಡಸ್ಟ್ರೀಯಲ್ ಎರಿಯಾ ಮತ್ತು ಸದರಿ ಪೀಡರ್ ಮೇಲೆ ಬರುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಾಗಲಿದೆ ಎಂದು ಬೆಳಗಾವಿ. ಹುವಿಸಕಂನಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ