ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉಗಾರ ಉಪವಿಭಾಗದ ಕಕ್ಷೆಯಲ್ಲಿ ಬರುವ 110 ಕೆವಿ ವಿದ್ಯುತ ವಿತರಣಾ ಕೇಂದ್ರದ ಶಿರಗುಪ್ಪಿ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣೆ ಕೈಗೊಳ್ಳಬೇಕಾಗಿರುವ ಹಿನ್ನಲೆಯಲ್ಲಿ ದಿ:28-11-2025 ರಂದು ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಶಿರಗುಪ್ಪಿ, ಜುಗೂಳ, ಶಹಪೂರ ಮತ್ತು ಮಂಗಾವತಿಯಲ್ಲಿ ಎನ್.ಜೆ.ವಾಯ್ ಹಾಗೂ ಪಂಪಸೆಟಗಳಿಗೆ ಸರಬರಾಜು ಆಗುವ ವಿದ್ಯುತ ಮಾರ್ಗಗಳ ವಿದ್ಯುತ ವ್ಯತಯವಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಉಗಾರ ಉಪವಿಭಾಗದ ಕಕ್ಷೆಯಲ್ಲಿ ಬರುವ 110/33/11 ಕೆವಿ ವಿದ್ಯುತ ವಿತರಣಾ ಕೇಂದ್ರದ ಶಿರಗುಪ್ಪಿ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣೆ ಕೈಗೊಳ್ಳಬೇಕಾಗಿರುವ ಹಿನ್ನಲೆಯಲ್ಲಿ ದಿ:26-11-2025 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಶೇಡಬಾಳ, ಶೇಡಬಾಳ ಸ್ಟೇಶನ್, ಕಲ್ಲಾಳ್, ದೊಂಡಿಮಡ್ಡಿ, ಮಂಗಸೂಳಿ, ಲೋಕುರ, ಉಗಾರ ಕೆ.ಎಚ್. ಫರೀದಖಾನ್‌ಾಡಿ, ವಿನಾಯಕವಾಡಿ, ಉಗಾರ ಬಿ.ಕೆ. ಪರಮೇಶ್ವರವಾಡಿ, ಕುಸನಾಳ, ಮತ್ತು ಮೋಳವಾಡ ಗ್ರಾಮಗಳಲಿ ಎನ್.ಜೆ.ವಾಯ್ ಹಾಗೂ ಪಂಪಸೆಟಗಳಿಗೆ ಸರಬರಾಜು ಆಗುವ ವಿದ್ಯುತ ಮಾರ್ಗಗಳ ವಿದ್ಯುತ ವ್ಯತಯವಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


