Latest

ಬೆಂಗಳೂರು ಯಾರ ಅಪ್ಪಂದು? ನಿಮ್ಮಪ್ಪಂದಾ ಅಥವಾ ನಮ್ಮ ಅಪ್ಪಂದಾ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಿರಿಯ ಸಚಿವರಿಬ್ಬರೂ ಪರಸ್ಪರ ಕಿತ್ತಾಡಿಕೊಂಡ ಘಟನೆ ನಡೆದಿದೆ. ವಸತಿ ಸಚಿವ ವಿ.ಸೋಮಣ್ಣ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಸಿಎಂ ಯಡಿಯೂರಪ್ಪನವರ ಎದುರೇ ಬೆಂಗಳೂರಿನ ವಿಚಾರವಾಗಿ ಕದನಕ್ಕಿಳಿದಿದ್ದಾರೆ.

ಸಿಎಂ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಅ ಸಭೆ ವೇಳೆ ಅಕ್ರಮ-ಸಕ್ರಮ ವಿಚಾರವಾಗಿ ಪ್ರಸ್ತಾಪವಾಗಿದ್ದು, ಮಾತಿನ ಮಧ್ಯೆ ವಿ.ಸೋಮಣ್ಣ ಬೆಂಗಳೂರಿನ ಸಮಸ್ಯೆ ನಿಮಗೇನು ಗೊತ್ತು? ಇಲ್ಲಿನ ಕಷ್ಟ ನಮಗೆ ಗೊತ್ತು ಎಂದು ಸಚಿವ ಮಾಧುಸ್ವಾಮಿ ವಿರುದ್ಧ ಗುಡುಗಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಮಾಧುಸ್ವಾಮಿ ಬೆಂಗಳೂರು ನಿಮ್ಮಪ್ಪಂದಾ..? ಅಥವಾ ನಮ್ಮಪ್ಪಂದಾ? ರಾಜಧಾನಿ ಯಾರ ಸ್ವತ್ತೂ ಅಲ್ಲ ಅದು ಎಲ್ಲರಿಗೂ ಸೇರಿದ್ದು. ನಾನು ಕಾನೂನ ಸಚಿವನಾಗಿ ಕಾನೂನು ವಿಚಾರವನ್ನು ಹೇಳುತ್ತಿದ್ದೇನೆ ಎಂದರು.

Home add -Advt

ಇಬ್ಬರು ಸಚಿವ ಜಗಳದಲ್ಲಿ ಸಿಎಂ ಯಡಿಯೂರಪ್ಪ ಕೆಲ ಕಾಲ ಮೂಕಪ್ರೇಕ್ಷಕರಾಗಿ ಕುಳಿತುಕೊಳ್ಳುವ ಸ್ಥಿತಿ ಎದುರಾಯಿತು. ಬಳಿಕ ಸಿಎಂ ಈ ರೀತಿ ಕಿತ್ತಾಡಿದ್ರೆ ಸರ್ಕಾರದ ಇಮೇಜ್ ಏನಾಗಬೇಕು? ಹಿರಿಯ ಸಚಿವರಾಗಿ ನೀವೆ ಕಿತ್ತಾಡಿದರೆ ಹೇಗೆ ಎಂದು ಗುಡಿಗಿದರು. ಕಾನೂನು ಸಚಿವರಾಗಿ ಮಾಧುಸ್ವಾಮಿ ಏನು ಹೇಳುತ್ತಾರೆ ಮೊದಲು ಹೇಳಲು ಬಿಡಿ ಎಂದು ಸೋಮಣ್ಣನವರನ್ನು ಸಮಾಧಾನ ಪಡಿಸಿದರು.

Related Articles

Back to top button