ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಡಿಜಿಟಲ್ ಮಾಧ್ಯಮ ಎಷ್ಟು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಎನ್ನುವುದಕ್ಕೆ ಇದು ಒಂದು ತಾಜಾ ಉದಾಹರಣೆ. ಜನರ ಇಂದಿನ ಅವಸರಕ್ಕೆ ತಕ್ಕಂತೆ ಡಿಜಿಟಲ್ ಮಾಧ್ಯಮ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ. ಜನರೂ ಅತ್ಯಂತ ವೇಗವಾಗಿ ಡಿಜಿಟಲ್ ಮಾಧ್ಯಮಕ್ಕೆ ಬದಲಾಗುತ್ತಿದ್ದಾರೆ.
ಬುಧವಾರ ಪ್ರಗತಿವಾಹಿನಿ ಪ್ರಕಟಿಸಿದ ಶಿಕ್ಷಣ ಸಚಿವ ಸುರೇಶ ಕುಮಾರ ಅವರ ಬಾಗಲಕೋಟೆಯ ಪತ್ರಿಕಾಗೋಷ್ಠಿಯ ಸುದ್ದಿ ಕೇವಲ 4 ಗಂಟೆಗಳಲ್ಲಿ 27 ಸಾವಿರ ಓದುಗರನ್ನು ತಲುಪಿತು. ಶಾಲೆಗಳ ಆರಂಭಕ್ಕೆ ಸಂಬಂಧಿಸಿದಂತೆ ವೈರಲ್ ಆಗಿದ್ದ ಸುತ್ತೋಲೆ ಕುರಿತು ಸುರೇಶ ಕುಮಾರ ನೀಡಿರುವ ಸ್ಪಷ್ಟೀಕರಣವನ್ನು ಪ್ರಗತಿವಾಹಿನಿ ಪ್ರಕಟಿಸಿತ್ತು.( ಶಾಲೆಗಳ ಆರಂಭ ಸುತ್ತೋಲೆ ಅಧಿಕೃತವಲ್ಲ -ಸುರೇಶ ಕುಮಾರ್ )
ಈ ಸುದ್ದಿ ರಾಜ್ಯದ ಮೂಲೆ ಮೂಲೆಗೂ ತಲುಪಿ ಕೇವಲ 4 ಗಂಟೆಯಲ್ಲಿ 26,983 ಜನರು ಓದಿದ್ದಾರೆ. ಈ ಓಟ ಮಧ್ಯರಾತ್ರಿಯ ನಂತರವೂ ಹಾಗೆಯೇ ಮುಂದುವರಿದಿತ್ತು.
2018ರ ನವೆಂಬರ್ 21ರಂದು ಆರಂಭಗೊಂಡಿರುವ ಪ್ರಗತಿ ಮೀಡಿಯಾ ಹೌಸ್ ಸಂಸ್ಥೆಯ ಪ್ರಗತಿವಾಹಿನಿ ಕೇವಲ ಒಂದೂವರೆ ವರ್ಷದಲ್ಲಿ ಲಕ್ಷ ಲಕ್ಷ ಓದುಗರ ಮನ ಗೆದ್ದಿದೆ. ಬೆಳಗಾವಿ ಕೇಂದ್ರಸ್ಥಾನವಾಗಿಸಿಕೊಂಡು ಕರ್ನಾಟಕದ ಮೂಲೆ ಮೂಲೆಯಲ್ಲೂ, ಅಷ್ಟೇ ಅಲ್ಲ ವಿಶ್ವದ ಬೇರೆ ಬೇರೆ ಭಾಗದ ಕನ್ನಡಿಗರನ್ನು ನಿರಂತರವಾಗಿ ತಲುಪುತ್ತಿದೆ.
ಕೇವಲ ಸುದ್ದಿ ಪ್ರಕಟಣೆಗಷ್ಟೆ ಸೀಮಿತವಾಗದೆ ಹಲವಾರು ಸಾಮಾಜಿಕ ಹೋರಾಟಗಳಲ್ಲೂ ಪ್ರಗತಿವಾಹಿನಿ ತನ್ನನ್ನು ತೊಡಗಿಸಿಕೊಂಡಿದೆ. ಓದುಗರ ವಿಶ್ವಾಸ, ನಿರಂತರ ಪ್ರೋತ್ಸಾಹಕ್ಕೆ ಸಾವಿರ ಸಾವಿರ ನಮನಗಳು. ನಿಮ್ಮ ಸಹಕಾರ ಇದೇ ರೀತಿ ಮುಂದುವರಿಯಲಿ.
-ಎಂ.ಕೆ.ಹೆಗಡೆ, ಸಂಪಾದಕ
ಮೊಬೈಲ್ -8197712235
#BoycottChineseProducts ಅಭಿಯಾನಕ್ಕೆ ಪ್ರಗತಿವಾಹಿನಿ ಬೆಂಬಲ
ಇಂದು 2ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ ನಿಮ್ಮ ಮಗು ಪ್ರಗತಿವಾಹಿನಿ
ನಿಮ್ಮ ಪ್ರೀತಿಯ ಪ್ರಗತಿವಾಹಿನಿಗೆ ವಾರ್ಷಿಕೋತ್ಸವದ ಸಂಭ್ರಮ
ಒಂದು ಲಕ್ಷ ದಾಟಿದ ಪ್ರಗತಿವಾಹಿನಿ ಓದುಗರ ಸಂಖ್ಯೆ; ಕೋಟಿ ಧನ್ಯವಾದಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ