*ಕಾಂಗ್ರೆಸ್ ಶಾಸಕರೇನು ಕುರಿ, ಕೋಣ, ಕತ್ತೆಗಳೇ ಖರೀದಿಸಲು? ಸಿಎಂ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು*
ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಶಾಸಕರೇನು ಕುರಿ, ಕೋಣ, ಕತ್ತೆಗಳೇ? ಖರೀದಿಸಲು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಿಎಂಗೆ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮತನಾಡಿದ ಸಚಿವರು, ಸಿಎಂ ತಮ್ಮ ಮತ್ತು ಸರ್ಕಾರದ ಮೇಲಿರುವ ಆರೋಪಗಳ ವಿಷಯಾಂತರಕ್ಕೆ ಹೀಗೆಲ್ಲ ಹೇಳುತ್ತಿದ್ದಾರೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.
ಶಾಸಕರ ಸಾರ್ವಜನಿಕ ಬದುಕನ್ನು ಹೀಗೆ ಕಲುಷಿತಗೊಳಿಸೋ ಕೆಲಸವನ್ನು ಮುಖ್ಯಮಂತ್ರಿ ಆದವರು ಮಾಡಬಾರದು ಸಿಎಂಗೆ ಕಿವಿಮಾತು ಸಹ ಹೇಳಿದರು.
ಕಾಂಗ್ರೆಸ್ಸಿಗರು ಹೀಗೆ ಹುಚ್ಚು ಹುಚ್ಚು ರೀತಿ ಮಾತನಾಡುವುದರಿಂದ ಪ್ರಜಾಪ್ರಭುತ್ವದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂದು ಸಚಿವ ಜೋಶಿ ಕಳವಳ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ಒಬ್ಬ ಶಾಸಕರಾದರೂ ಹೇಳಿದ್ದಾರೆಯೇ?: ಬಿಜೆಪಿ 50 ಕೋಟಿ ಆಫರ್ ನೀಡಿದೆ ಎಂದು ಅಥವಾ ಮಧ್ಯವರ್ತಿಯನ್ನು ಹೆಸರಿಸಿ ಕಾಂಗ್ರೆಸ್ಸಿನ ಒಬ್ಬ MLA ಆದರೂ ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಆದವರು ಸ್ವಲ್ಪ ಜವಾಬ್ದಾರಿ ಅರಿತು ಮಾತನಾಡಬೇಕಾಗುತ್ತದೆ ಎಂದು ಸಿಎಂರನ್ನು ಕುಟುಕಿದರು.
ಸಿಎಂ, ಮತ್ತವರ ತಂಡದ ಆರೋಪ ನೋಡಿದರೆ ಕಾಂಗ್ರೆಸ್ ಶಾಸಕರನ್ನು ಇವರು ಮಾರುಕಟ್ಟೆಯಲ್ಲಿ ಇಟ್ಟಂತೆ ಕಾಣುತ್ತದೆ. ಮಾರುಕಟ್ಟೆಯಲ್ಲಿ ಸಿಗೋದು ಕುರಿ, ಕೋಣ, ಕತ್ತೆಗಳು ಶಾಸಕರಲ್ಲ ಎಂದು ಹರಿಹಾಯ್ದರು.
ಸಿಎಂಗೆ ಏನಾದ್ರೂ ಸೆನ್ಸ್ ಇದೆಯೇ? ಒಬ್ಬೊಬ್ಬ ಶಾಸಕರಿಗೆ 50 ಕೋಟಿ ಅಂದರೆ 2500 ಕೋಟಿ ರೂಪಾಯಿ ಆಗುತ್ತದೆ. ಸಿಎಂಗೆ ಸ್ವಲ್ಪವಾದರೂ ಸೆನ್ಸ್ ಇದೆಯೇ? ಎಂದು ಪ್ರಶ್ನಿಸಿದ ಪ್ರಲ್ಹಾದ ಜೋಶಿ, ಸಿಎಂ ರಾಜಕಾರಣ ಮಾಡಬೇಕೆಂಬ ಕಾರಣಕ್ಕೆ ಹೀಗೆ ಏನೆಲ್ಲ ಹೇಳುವುದು ಸರಿಯಲ್ಲ ಎಂದು ಖಂಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ