*ಸಿಎಂ ಸಿದ್ದರಾಮಯ್ಯ ದೇವಸ್ಥಾನಗಳ ಹುಂಡಿಗೆ ಕನ್ನ ಹಾಕುವಂಥ ಕನ್ನರಾಮಯ್ಯ; ಪ್ರಹ್ಲಾದ್ ಜೋಶಿ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಸಿಎಂ ಸಿದ್ದರಾಮಯ್ಯ ಹಿಂದೂ ದೇವಸ್ಥಾನಗಳ ಹುಂಡಿಗೆ ಕನ್ನ ಹಾಕುವ ಕನ್ನರಾಮಯ್ಯ ಆಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತ, ಕಾಂಗ್ರೆಸ್ ಘೋಷಿಸಿದ ಬೋಗಸ್ ಗ್ಯಾರಂಟಿಗಳನ್ನು ನಿರ್ವಹಿಸಲು ಸಾಧ್ಯವಾಗದೇ ಹೀಗೆ ದೇವಸ್ಥಾನಗಳ ಹುಂಡಿಗೆ ಕನ್ನ ಹಾಕುವ ಕೃತ್ಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪೂರ್ವಾಪರ ತಯಾರಿ ಮಾಡದೆ ಘೋಷಿಸಿದ ಗ್ಯಾರಂಟಿಗಳು ಎಲ್ಲಾ ಬೋಗಸ್ ಆಗಿವೆ. ಅವನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ ಇಂಥದ್ದನ್ನೆಲ್ಲ ಮಾಡುತ್ತಿದ್ದಾರೆ ಎಂದು ಸಚಿವ ಜೋಶಿ ಆರೋಪಿಸಿದರು.
ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸುವಲ್ಲಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಿತಿಮೀರಿದೆ. ಇದನ್ನು ನಾವಲ್ಲ; ಕಾಂಗ್ರೆಸ್ ನವರೇ ಹೇಳುತ್ತಿದ್ದಾರೆ ಎಂದು ಜೋಶಿ ತಿಳಿಸಿದರು.
ಸಿಎಂ ಸಿದ್ದರಾಮಯ್ಯ, ಸುಳ್ಳುರಾಮಯ್ಯ ಆದರು. ಸಾಲಾರಾಮಯ್ಯ ಆದರು. ಈಗ ಹಿಂದೂ ದೇಗುಲಗಳ ಹುಂಡಿಗಳಿಗೆ ಕನ್ನ ಹಾಕುವಂಥ ಕನ್ನರಾಮಯ್ಯ ಆಗಿದ್ದಾರೆ. ರಾಜ್ಯ ಸರ್ಕಾರ ಸಂಪೂರ್ಣ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಇದನ್ನೆಲ್ಲ ಡೈವರ್ಟ್ ಮಾಡಲು ಏನು ಬೇಕೋ ಅದನ್ನು ಮಾಡುತ್ತಿದ್ದಾರೆ ಎಂದು ಸಚಿವ ಜೋಶಿ ವಾಗ್ದಾಳಿ ನಡೆಸಿದರು.
ಯುಪಿಎ ಕಾಲದಲ್ಲಿ ಬಂದ ಅನುದಾನದ ಲೆಕ್ಕ ಕೊಡಿ: ಯುಪಿಎ ಅವಧಿಯಲ್ಲಿ ನೀವೇ ಅಧಿಕಾರದಲ್ಲಿ ಇದ್ರೀ. ಆಗ ಎಸ್ಟು ಅನುದಾನ ಬಂದಿದೆ?. ಈಗಲೂ ನೀವೇ ಇದ್ದೀರಿ. ಈಗ NDA ಅವಧಿಯಲ್ಲಿ ಎಷ್ಟು ಬಂದಿದೆ ಲೆಕ್ಕ ಕೊಡಿ ಫಸ್ಟು ಎಂದು ಸಚಿವ ಪ್ರಹ್ಲಾದ ಜೋಶಿ ಕೇಳಿದ್ದಾರೆ.
ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ 60000 ಲಕ್ಷ ಕೋಟಿ ಬಂದಿದೆ. NDA ಅವಧಿಯಲ್ಲಿ 2.85 ಲಕ್ಷ ಕೋಟಿ ತೆರಿಗೆ ಹಂಚಿಕೆ ಕೊಟ್ಟಿದೆ. ಇದನ್ನೆಲ್ಲ ವಿಧಾನಸಭೆಗೆ ವಿವರಣೆ ಕೊಟ್ಟಿದ್ದೇವೆ ಎಂದು ಸಚಿವ ಜೋಶಿ ಹೇಳಿದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ