Kannada NewsKarnataka NewsLatestPolitics

*ಕಾಣೆಯಾಗಿದ್ದ ವಿದ್ಯಾರ್ಥಿ ನೀಲಗಿರಿ ತೋಪಿನಲ್ಲಿ ಸುಟ್ಟ ರೀತಿಯಲ್ಲಿ ಶವವಾಗಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳಿಂದ ಹಾಸ್ಟೇಲ್ ನಿಂದ ನಾಪತೆಯಾಗಿದ್ದ ಬಿ ಟೆಕ್ ವಿದ್ಯಾರ್ಥಿಯೊಬ್ಬ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಆನೇಕಲ್ ಸಮೀಪ ನೀಲಗಿರಿ ತೋಪಿನಲ್ಲಿ ನಡೆದಿದೆ.

ಹರ್ಷಿತ್ ಮೃತ ಬಿಟೆಕ್ ವಿದ್ಯಾರ್ಥಿ. ತಮಿಳುನಾಡಿನ ಗುಮ್ಮಳಾಪುರದ ಹಾಸ್ಟೇಲ್ ನಲ್ಲಿದ್ದು ಬಿಟೆಕ್ ವ್ಯಾಸಂಗ ಮಾಡುತ್ತಿದ್ದ . ಫೆ.21ರಿಂದ ನಾಪತ್ತೆಯಾಗಿದ್ದ.

Home add -Advt

ತಮಿಳುನಾಡಿನ ತಳಿ ಠಾಣೆಯಲ್ಲಿ ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಇದೀಗ ಆನೇಕಲ್ ಬಳಿಯ ನೀಲಗಿರಿ ತೋಪಿನಲ್ಲಿ ವಿದ್ಯಾರ್ಥಿ ಶವ ಸುಟ್ಟುಹಾಕಿರುವ ರೀತಿಯಲ್ಲಿ ಪತ್ತೆಯಾಗಿದೆ.

ಸ್ಥಳೀಯರು ಶವವೊಂದು ಪತ್ತೆಯಾಗಿರುವ ಬಗ್ಗೆ ಆನೇಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಬ್ಯಾಗ್, ಕೆಲ ದಾಖಲೆಗಳು ಲಭ್ಯವಾಗಿದ್ದು, ಇದು ನಾಪತ್ತೆಯಾಗಿದ್ದ ಬಿಟೆಕ್ ವಿದ್ಯಾರ್ಥಿಯ ಶವ ಎಂದು ಖಚಿತವಾಗಿದೆ.

ವಿದ್ಯಾರ್ಥಿಯನ್ನು ಕೊಲೆಗೈದು ಸುಟ್ಟುಹಾಕಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Related Articles

Back to top button