Kannada NewsKarnataka NewsLatest

*ಬೈಕ್ ಓವರ್ ಟೇಕ್ ವಿಚಾರವಾಗಿ ಗಲಾಟೆ; ಯುವಕನ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಜಾತ್ರೆಯ ವೇಳೆ ಬೈಕ್ ಓವರ್ ಟೇಕ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಯುವಕನನ್ನು ಬರ್ಬರವಾಗಿ ಕೊಲೆ ಮಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹುಣಶೆಟ್ಟಿ ಕೊಪ್ಪದಲ್ಲಿ ನಡೆದಿದೆ.

ಹಳಿಯಾಳ ಮೂಲದ ಪ್ರಜ್ವಲ್ ಪ್ರಕಾಶ್ ಮೃತ ದುರ್ದೈವಿ. ಸಾಣಾ ಮರಾಠಿ, ಅನಿಕೇತ್ ಮಿರಾಶಿ, ರಿಶಿಕೇಶ್ ಪಾಟೀಲ್ , ಪಾಂಡುರಂಗ, ಪ್ರಶಾಂತ್ ರೂಪೇಶ್ ಕೊಲೆಗೈದ ಆರೋಪಿಗಳು.

Home add -Advt

ಹುಣಶೆಟ್ಟಿ ಕೊಪ್ಪದ ಜಾತ್ರೆಗೆ ಹೋಗಿದ್ದ ಯುವಕರ ಗುಂಪು ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸಿಕೊಂಡು ಬರುತ್ತಿದ್ದರು. ಈ ವೇಳೆ ಪ್ರಜ್ವಲ್ ಪ್ರಕಾಶ್ ಕೂಡ ಬೈಕ್ ನಲ್ಲಿ ವೇಗವಾಗಿ ತೆರಳುತ್ತಿದ್ದ ಆತನ ಬೈಕ್ ನನು ಯುವಕರ ಗುಂಪು ಓವರ್ ಟೇಕ್ ಮಾಡಿದ್ದಾರೆ. ಹೀಗೆ ಯುವಕರ ಗುಂಪು ಹಾಗೂ ಯುವಕನ ಮಧ್ಯೆ ಗಲಾಟೆ ನಡೆದಿದೆ. ಪ್ರಜ್ವಲ್ ಪ್ರಕಾಶ್ ಗೆ ಯುವಕರು ಥಳಿಸಿದ್ದಾರೆ ಎನ್ನಲಾಗಿದ್ದು, ಯುವಕ ಸ್ಥಳದಲ್ಲೇ ಕೊಲೆಯಾಗಿದ್ದಾನೆ.

ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Related Articles

Back to top button