Kannada NewsKarnataka NewsLatest

ಅದ್ಧೂರಿಯಾಗಿ ನಡೆದ ಪ್ರಜಾಧ್ವನಿ ಯಾತ್ರೆ ರೋಡ್ ಶೋ

https://www.facebook.com/watch/?v=164485693043750

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಲೂಕಿನ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಜಾಧ್ವನಿ ಯಾತ್ರೆ  ರೋಡ್ ಶೋ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ನಡೆದಿದೆ.

Home add -Advt

ಶಿಂದೊಳ್ಳಿ ಗ್ರಾಮದಿಂದ ಆರಂಭಗೊಂಡ ರೋಡ್ ಶೋದಲ್ಲಿ ಡೊಳ್ಳು, ವಾದ್ಯಗಳೊಂದಿಗೆ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲಾಯಿತು. ಬೆಳಗಾವಿ- ಬಾಗಲಕೋಟೆ ಮಾರ್ಗದಲ್ಲಿ ನಡೆದ ರೋಡ್ ಶೋದಲ್ಲಿ ಸಾವಿರಾರು ಜನ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ನಲ್ಲಿ ರ್ಯಾಲಿ ನಡೆಸಿದ್ದರೆ,  ಯಾತ್ರೆಗಾಗಿಯೇ ಸಿದ್ಧಗೊಳಿಸಿದ ವಿಶೇಷ ವೋಲ್ವೋ ಬಸ್ ನಿಂದ ಸಿದ್ದರಾಮಯ್ಯ ಜನರತ್ತ ಕೈ ಬೀಸಿ ಗಮನ ಸೆಳೆದರು.

ಮಾರ್ಗದುದ್ದಕ್ಕೂ ಜನ ಹೂಮಳೆಗರೆದರಲ್ಲದೆ ಸಿದ್ದರಾಮಯ್ಯ ಅವರಿಗೆ 25 ಅಡಿ ಉದ್ದದ ಬೃಹತ್ ಗುಲಾಬಿ ಹೂವಿನ ಮಾಲೆ ತೊಡಿಸಿದ್ದು ವಿಶೇಷವಾಗಿತ್ತು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಜಮೀರ್ ಅಹಮ್ಮದ್, ಪ್ರಕಾಶ ರಾಠೋಡ, ಮುಖಂಡರಾದ ವಿನಯ ನಾವಲಗಟ್ಟಿ, ಲಕ್ಷ್ಮಣರಾವ್ ಚಿಂಗಳೆ, ಮಾಜಿ ಶಾಸಕ ಅಶೋಕ ಪಟ್ಟಣ, ಹಿರೇಬಾಗೇವಾಡಿಯ ಪೀರಜ್ಜ, ಶಂಕರಗೌಡ ಪಾಟೀಲ ಸೇರಿದಂತೆ ಅನೇಕ ಗಣ್ಯರು ರೋಡ್ ಶೋನಲ್ಲಿ ಭಾಗವಹಿಸಿದ್ದರು.

ಇಂಗ್ಲೆಂಡ್ ನಿಂದ ಜಗತ್ತಿಗೆ ಹೊಸ ಗೆಟಪ್ ನಲ್ಲಿ ದರ್ಶನ ನೀಡಿದ ರಾಹುಲ್

https://pragati.taskdun.com/rahul-showed-the-world-in-a-new-getup-from-england/

*NPS ವಿಚಾರ; ಸಮಿತಿ ರಚನೆ ಎಂದ ಸಿಎಂ*

https://pragati.taskdun.com/7th-pay-commissiongovt-employeescm-basavaraj-bommai/

*ರಾಜ್ಯ ಸರ್ಕಾರಿ ನೌಕರರ ಮುಷ್ಕರ ವಾಪಸ್; ಸಿ.ಎಸ್.ಷಡಕ್ಷರಿ ಘೋಷಣೆ*

https://pragati.taskdun.com/7th-pay-commissiongovt-employeesstrike-endc-s-shadakshari/

 

Related Articles

Back to top button