ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಎದುರಾಗಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಪ್ರಜ್ವಲ್ ರೇವಣ್ಣ ತಮ್ಮ 15ನೇ ವರ್ಷದಲ್ಲಿಯೇ 23 ಕೋಟಿ ರೂ ಆಸ್ತಿ ಹೊಂದಿದ್ದರು. ತೆರಿಗೆ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ ಅಲ್ಲದೇ ಚುನಾವಣಾ ಆಯೋಗಕ್ಕೂ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ನ್ಯಾ.ಸಂಜಯ್ ಕಿಶನ್ ಹಾಗೂ ನ್ಯಾ.ಸುಂದರೇಶನ್ ನೇತೃತ್ವದ ಪೀಠ ಪ್ರಜ್ವಲ್ ರೇವಣ್ಣ ವಿರುದ್ಧ ತನಿಖೆ ನಡೆಸಲು ಐಟಿ ಇಲಾಖೆಗೆ ಅನುಮತಿ ನೀಡಿದೆ.
ಮುಸ್ಲೀಂ ಪುರುಷರು ಏನು ಮಾಡುತ್ತಾರೋ ಎಂಬ ಭಯ, ರಕ್ಷಣೆ ಪಡೆಯಲು ಮಹಿಳೆಯರು ಬುರ್ಖಾ ಧರಿಸುತ್ತಾರೆ; ಆರ್.ಎಸ್.ಎಸ್ ಮುಖಂಡ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ