Kannada NewsKarnataka NewsLatestPolitics

*ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯಲಿ: ಡಿಕೆಶಿಗೆ ಟಾಂಗ್ ಕೊಟ್ಟ ಪ್ರಸನ್ನಾನಂದ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ: ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆದರೆ ನಮ್ಮ ಹಾಗೂ ವಾಲ್ಮೀಕಿ ಸಮಾಜದ ಶಾಸಕರ ವಿರೋಧವಿಲ್ಲ. ಆದರೆ ಒಂದು ವೇಳೆ ಬದಲಾವಣೆಯಾದರೆ ಅಹಿಂದ ಮುಖಂಡರಿಗೆ ಸಿಎಂ ಸ್ಥಾನ ನೀಡಬೇಕು ಎಂದು ವಾಲ್ಮೀಕಿ ಪೀಠದ ರಾಜನಹಳ್ಳಿ ಪ್ರಸನಾನಂದ ಸ್ವಾಮೀಜಿ ಒತ್ತಾಯಿಸಿದರು.

ಬೆಳಗಾವಿ ನಗರದ ಖಾಸಗಿ ಹೋಟೆಲ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ಶೀ ಮಠದಿಂದ ವಾಲ್ಮೀಕಿ ಜಯಂತಿ‌ ಮಾಡುತ್ತೇವೆ. ಹೀಗಾಗಿ ಸತೀಶ ಜಾರಕಿಹೋಳಿ ಸಭೆಗೆ ಬಂದಿದ್ದರು. ಅಧಿವೇಶನದಲ್ಲಿ ಬಹುತೇಕ ನಮ್ಮ ಎಲ್ಲ ಸಮೂದಾಯದ ನಾಯಕರು ಬಂದಿರುತ್ತಾರೆ. ಹೀಗಾಗಿ ಜಾತ್ರೆಯ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ರಾಯಚೂರ ಶಾಸಕ ಬಸವನಗೌಡ ದದ್ದಲ್ ಅವರನ್ನ ಅಧ್ಯಕ್ಷ ಮಾಡಿದ್ದೇವೆ. ಇಂದು ಮಧ್ಯಾಹ್ನ ಸಿಎಂ ಅವರನ್ನ ಜಾತ್ರೆಗೆ ಆಹ್ವಾನಿಸಲು ಹೊರಟಿದ್ದೇವೆ. ಈ ವೇಳೆ ಸಮೂದಾಯಕ್ಕೆ ಎರಡು ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿಕೊಳ್ಳಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಮುಂದುವರೆದರೆ ವಾಲ್ಮೀಕಿ‌ ಸಮಾಜದ ಶಾಸಕರು ಹಾಗೂ ಸಮಾಜದಿಂದ ಬೆಂಬಲ ವಿದೆ.‌ ಒಂದ ವೇಳೆ ಸಿಎಂ ಸ್ಥಾನದಿಂದ ಇಳಿದರೆ ದಲಿತರು ಸಿಎಂ ಆಗಬೇಕು ಎಂದು ಪರೋಕ್ಷವಾಗಿ ಡಿಕೆಶಿ ಸಿಎಂ ಆಗಬಾರದು ಎಂಬ ರೀತಿಯಲ್ಲಿ ಮಾತನಾಡಿದ್ದಾರೆ.

ನಮ್ಮ ಸಮಾಜದ ನಾಲ್ಕೈದು ನಾಯಕರಿದ್ದಾರೆ.‌ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ, ಎಚ್ ಸಿ, ಮುನಿಯಪ್ಪ ಹಾಗೂ ಸತೀಶ ಜಾರಕಿಹೋಳ ಸಿಎಂ ಆಗಲಿ ಎಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ‌ ಅವರಿಗೆ ಟಾಂಗ್ ಕೊಟ್ಟರು.

Home add -Advt

Related Articles

Back to top button