*ಗರ್ಭಿಣಿ ಹತ್ಯೆ ಪ್ರಕರಣ; ಪತಿ ಸೇರಿ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬೆಳಗಾವಿ ಕೋರ್ಟ್*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 2020ರಲ್ಲಿ ನಡೆದಿದ್ದ ಗರ್ಭಿಣಿ ಹತ್ಯೆ ಪ್ರಕರಣಕ್ಕೆಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 20,000 ರೂಪಾಯಿ ದಂಡ ವಿಧಿಸಿ ಬೆಳಗಾವಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಸದ್ದಾಮ ಅಮೀನ ಬಾಗೆ, ಅಫ್ರಿನ ಸಿರಾಜ ನಾಗನೂರೆ, ಶೈನಾಜ ಸಿರಾಜ್ ನಾಗನೂರೆ, ಸುಲ್ತಾನ ಸಿರಾಜ್ ನಾಗನೂರೆ ಜಿವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಗಳು.
ಬೆಳಗಾವಿಯ 7ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಕಾಗವಾಡದ ಕೆ.ಹೆಚ್.ಪಟ್ಟಣ ಸಾಯಿನಗರದ ನಿವಾಸಿ ಸದ್ದಾಮ ಅಮೀನ ಭಾಗೆ ಎಂಬಾತನಿಗೆ ಐನಾಪುರ ಗ್ರಾಮದ ಯೂಸುಫ್ ರಸೂಲಸಾಬ ಅವರ ಮಗಳು ಸುಮಯ್ಯಾಳನ್ನು ವಿವಾಹಮಾಡಿ ಕೊಡಲಾಗಿತ್ತು. 2020ರಲ್ಲಿ ಸುಮಯ್ಯಾ 5 ತಿಂಗಳ ಗರ್ಭಿಣಿ ಎಂಬುದನ್ನೂ ನೋಡದೇ ಪತಿ ಸದ್ದಾಮ ಹಾಗೂ ಮನೆಯವರು ಸುಮಯ್ಯಾಳ ಕೈಕಾಲುಗಳನ್ನು ಹಿಡಿದುಕೊಂಡು, ತಲೆದಿಂಬಿನಿಂದ ಮುಖದ ಮೇಲೆ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ