Kannada NewsKarnataka NewsLatest

*PSI ಪ್ರಶ್ನೆ ಪತ್ರಿಕೆ ಸೋರಿಕೆ; ಸಬ್ ಇನ್ಸ್ ಪೆಕ್ಟರ್ ಸಿಸಿಬಿ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಜನವರಿ 23ರಂದು ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಮರುಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸಿರುವಾಗಲೇ ಪಿಎಸ್ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪ ಕೇಳಿಬಂದಿದೆ.

ಪಿಎಸ್ ಐ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಆಡಿಯೋ ವೈರಲ್ ಆಗಿದ್ದು, ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಇಂಟಲಿಜನ್ಸ್ ವಿಭಾಗದ ಸಬ್ ಇನ್ಸ್ ಪೆಕ್ಕ್ಟರ್ ಲಿಂಗಯ್ಯ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

Home add -Advt

ಲಿಂಗಯ್ಯ ಮೊಬೈಲ್ ವಾಟ್ಸಾಪ್ ಸ್ಕ್ರೀನ್ ಶಾಟ್ ಕೂಡ ವೈರಲ್ ಆಗಿದೆ. ಅವರು ಯಾರ ಜೊತೆ ಮಾತನಾಡಿದ್ದರು, ಚಾಟ್ ಮಾಡಿದ್ದರು ಎಂಬ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕುತ್ತಿದೆ. ವಿಚರಣೆ ವೇಳೆ ಲಿಂಗಯ್ಯ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಹಿತಿ ಕಲೆಹಾಕಲು ತಾನು ಫೇಕ್ ಆಡಿಯೋ ಮಾಡಿದ್ದಾಗಿ ಹೇಳಿದ್ದಾರೆ. ತನಿಖೆ ಮುಂದುವರೆದಿದೆ.

Related Articles

Back to top button