*ನಾಲ್ಕು ತಿಂಗಳ ಹಿಂದೆ ಮುದುವೆ ಆಗಿದ್ದ ಗರ್ಭಿಣಿ ಆತ್ಮಹತ್ಯೆ…? ಕೊಲೆ ಶಂಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಲ್ಕು ತಿಂಗಳ ಹಿಂದೆ ಮದುವೆ ಆಗಿದ್ದ ಮೂರು ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರು ಘಟನೆ ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ನಡೆದಿದೆ.
ಅನೀತಾ ನೀಲೇಶ್ ನೀಲದಕರ್(25) ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅನಿತಾ ಶವ ಅನುಮಾನಾಸ್ಪದವಾಗಿ ಸಿಕ್ಕ ಹಿನ್ನೆಲೆ ಅನಿತಾ ಮನೆಯವರು ಗಂಡ ನಿಲೇಶ್ ಮೇಲೆ ಕೊಲೆ ಆರೋಪ ಮಾಡಿದ್ದಾರೆ.
ನಾಲ್ಕು ತಿಂಗಳ ಹಿಂದೆಯಷ್ಟೆ ಅನಿತಾ ಹಾಗೂ ನೀಲೇಶ್ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ. ಫಿಜ್ಜಾ ಹಟ್ ಒಂದರಲ್ಲಿ ಕೆಲಸ ಮಾಡ್ತಿದ್ದ ಅನಿತಾ ಹಾಗೂ ನೀಲೇಶ್ ಪರಸ್ಪರ ಪ್ರೀತಿಸಿ ರೆಜಿಸ್ಟರ್ ಮ್ಯಾರೇಜ್ ಆಗಿದ್ದರು.
ಅನಿತಾ ಸಾವನ್ನಪ್ಪಿದ ಹಿನ್ನೆಲೆ, ಅನಿತಾ ಗಂಡನ ಮನೆಯ ಮುಂದೆ ಸಂಬಂಧಿರಕ ಆಕ್ರಂದಣ ಮುಗಿಲು ಮುಟ್ಟಿದೆ. ಗಂಡ ಹಾಗೂ ಗಂಡನ ಮನೆಯವರೆ ತಮ್ಮ ಮಗಳು ಅನಿತಾರನ್ನು ಕೊಲೆ ಮಾಡಿದ್ದಾರೆ ಎಂದು ಅನಿತಾ ಮನೆಯವರು ಆರೋಪಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿ, ಅನಿತಾ ಪತಿ ನೀಲೇಶನನ್ನು ವಶಕ್ಕೆ ಪಡೆದಿದ್ದಾರೆ.