Belagavi NewsBelgaum NewsKannada NewsKarnataka NewsNationalPolitics

ವಿವಾದದ ನಡುವೆಯೇ ಸಂಬಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಸಿದ್ಧತೆ: ಮೇಯರ್ ಸವಿತಾ ಕಾಂಬಳೆ ಗರಂ ಆಗಿದ್ದು ಯಾಕೆ‌..?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಛತ್ರಪತಿ ಸಂಬಾಜಿ ಮಾಹಾರಾಜರ ಪ್ರತಿಮೆ ಅನಾವರಣಕ್ಕೆ ಅನುಮತಿ ಈವರೆಗೂ ದೊರೆಕಿಲ್ಲ, ಆದರೂ ಎರಡು ಗುಂಪುಗಳ ನಡುವೆ ಜಾಟಾಪಾಟಿ ಮುಂದುವರೆದಿದೆ. 

ಈ ಮಧ್ಯೆ ಇಂದೇ ಮೂರ್ತಿ ಅನಾವರಣ ಮಾಡುವುದು ಖಚಿತ ಎಂದು ಶಾಸಕ ಅಭಯ ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯ ಆನಗೋಳದ ಡಿವಿಎಸ್ ಚೌಕ್ ನಲ್ಲಿ ನಿರ್ಮಾಣವಾಗಿರುವ 21ಅಡಿ ಎತ್ತರದ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.‌ ಜಿಲ್ಲಾಡಳಿತದ ವಿರೋಧದ ನಡುವೆ ಮೂರ್ತಿ ಅನಾವರಣ ಮಾಡುವುದಾಗಿ ಶಾಸಕ ಅಭಯ ಪಾಟೀಲ್ ಘೋಷಣೆ ಮಾಡಿದ್ದು, ಕೆಲವೆ ಕ್ಷಣದಲ್ಲಿ ಪ್ರತಿಮೆ ಅನಾವರಣ ಆಗಲಿದೆ.‌

ಕಳೆದ ಐದಾರು ದಿನದಿಂದ ಬೆಳಗಾವಿಯ ಅನಗೋಳದಲ್ಲಿ ಇರುವ ಸಂಭಾಜಿ ಮಹಾರಾಜರ್ ಪ್ರತಿಮೆ ಅನಾವರಣ ಮಾಡಲು ಬಿಜೆಪಿ ಶಾಸಕ ಅಭಯ ಪಾಟೀಲ ಹಾಗೂ ಪಾಲಿಕೆ ಸದಸ್ಯರು ತಯಾರಿ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಶನಿವಾರ ಸಭೆ ನಡೆಸಿ ಪುತ್ಥಳಿ ಅನಾವರಣ ಮುಂದೂಡುವ ಪ್ರಯತ್ನ ಮಾಡಿದ್ದಾರೆ.

ಈ ಮಧ್ಯೆ ಅನಾವರಣ ತಡೆಯಲು ಸ್ಥಳದಲ್ಲಿರುವ ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಮೇಲೆ ಮೇಯರ್ ಸವಿತಾ ಕಾಂಬಳೆ ಗರಂ ಆಗಿದ್ದಾರೆ

ಸಂಭಾಜೀ ಮಹಾರಾಜರ ಪುತ್ಥಳಿ ಅನಾವಾರಗೊಳಿಸಲು ಸಿದ್ಧತೆ ಪರಿಶೀಲನೆಗೆ ಆಗಮಿಸಿದ ಮೇಯರ್ ಸವಿತಾ ಕಾಂಬಳೆ ಹಾಗೂ ಉಪಮೇಯರ್ ಗೆ ಪಾಲಿಕೆ ಅಧಿಕಾರಿ ಲಕ್ಷ್ಮಿ ನಿಪ್ಪಾಣಕರ್ ಅವರು ಅನುಮತಿ ನಿರಾಕರಿಸಿದ್ದಾರೆ. ಈ ವೇಳೆ ಗರಂ ಆಗಿರುವ ಮೇಯರ್ ಸವಿತಾ ಕಾಂಬಳೆ ಅವರು, ಪುತ್ಥಳಿ ಸುತ್ತಲೂ ಇರುವ ಕಟ್ಟಿಗೆ ಹಾಗೂ ಹಸಿರು ಪರದೆ ಬಿಚ್ಚಿ, ಇಲ್ಲ ನಾನೇ ಪರದೆ ಬಿಚ್ಚಲಾ ಎಂದು ಪ್ರಶ್ನಿಸಿದ್ದಾರೆ. ಸ್ಥಳಕ್ಕೆ ಬರುವಂತೆ ನಿಮ್ಮ ಅಧಿಕಾರಿಗಳಿಗೆ ತಿಳಿಸಿ ಎಂದು ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಮೇಲೆ ಮೇಯರ್ ಸವಿತಾ ಕಾಂಬಳೆ ಗರಂ ಆಗಿದ್ದಾರೆ. ಈ ವೇಳೆ ಮೇಯರ್ ಮುಂದೆ ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ್ ಅವರು ಸುಮ್ಮನೆ ನಿಂತಿದ್ದಾರೆ. ನಂತರ ಮೇಯರ್ ಸ್ವತಃ ಮುಂದೆ ಹೋಗಿ ತಡೆಗಳನ್ನು ತೆಗೆದಿದ್ದಾರೆ.

ಸ್ಥಳದಲ್ಲೆ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ 7ಕೆಎಸ್ ಆರ್ ಪಿ ಪೊಲೀಸ್ ವಾಹನಗಳು, ಎಸಿಪಿ, ಮೂವರು ಸಿಪಿಐಗಳು ಬಿಗಿ ಪೊಲೀಸ್ ಬಂದೋಬಸ್ತ್ ನಿರ್ವಹಿಸುತ್ತಿದ್ದಾರೆ.

ಇನ್ನು ಕೆಲವೇ ಕ್ಷಣದಲ್ಲಿ ಗಣ್ಯರ ಸಮ್ಮುಖದಲ್ಲಿ ಅನಾವರಣಕ್ಕೆ ಸಿದ್ಧತೆ ನಡೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button