ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೋನಾ ಪ್ರಕರಣ ತೀವ್ರಗತಿಯಲ್ಲಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಅನ್ ಲಾಕ್ 3.O ಗೆ ರಾಜ್ಯ ಸರಕಾರ ಸಿದ್ಧತೆ ನಡೆಸಿದೆ.
ಕಳೆದ ಕೆಲವು ದಿನಗಳಿಂದ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಮತ್ತು ಪಾಸಿಟಿವಿಟ್ ಪ್ರಮಾಣ ಸಾಕಷ್ಟು ಇಳಿಕೆಯಾಗುತ್ತಿದೆ. ಜೊತೆಗೆ ಲಾಕ್ ಡೌನ್ ತೆರವಿಗೆ ಇನ್ನಷ್ಟು ಉದ್ಯಮಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸರಕಾರ ಈ ಬಗ್ಗೆ ಚಿಂತನೆ ನಡೆಸಿದೆ.
ಮಂಗಳವಾರ ರಾಜ್ಯದ ಮಾಲ್ ಮಾಲಿಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾಲ್ ಓಪನ್ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. 2 -3 ದಿನ ಸಮಯಾವಕಾಶ ನೀಡುವಂತೆ ಯಡಿಯೂರಪ್ಪ ತಿಳಿಸಿದ್ದು, ಪರಿಸ್ಥಿತಿ ತಿಳಿದುಕೊಂಡು ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಶುಕ್ರವಾರದ ಹೊತ್ತಿಗೆ ಅನ್ ಲಾಕ್ 3ಗೆ ಮಾರ್ಗಸೂಚಿ ಸಿದ್ಧಪಡಿಸಿಕೊಂಡು ಸೋಮವಾರದಿಂದ ಜಾರಿಮಾಡುವ ಸಾಧ್ಯತೆ ಇದೆ.
ಮಾಲ್, ಸ್ವಿಮ್ಮಿಂಗ್ ಫೂಲ್ ಗಳ ಓಪನ್ ಜೊತೆಗೆ, ಕೆಲವು ಮಾದರಿಯ ಉದ್ಯಮಗಳಿಗೆ ನೂರರಷ್ಟು ಹಾಜರಾತಿಗೆ ಅನುಮತಿ ನೀಡುವ ಸಾಧ್ಯತೆ ಇದೆ.
ಆದರೆ ಶಾಲೆಗಳ ಆರಂಭಕ್ಕೆ ಸಧ್ಯಕ್ಕೆ ಅನುಮತಿ ನೀಡುವುದು ಅನುಮಾನ. ಆಗಷ್ಟ ಹೊತ್ತಿಗೆ ಶಾಲೆ ಆರಂಭದ ಕುರಿತು ಪುನರ್ ಪರಿಶೀಲಿಸುವ ಸಾಧ್ಯತೆ ಇದೆ.
3ನೇ ಅಲೆಯ ಆತಂಕವಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ತೆರೆಯುವುದು ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಾಗಾಗಿ ಸಧ್ಯಕ್ಕೆ ಆನ್ ಲೈನ್ ತರಗತಿ ಮತ್ತು ವಿದ್ಯಾಗಮ 2 ಆರಂಭಿಸಲು ಚಿಂತನೆ ನಡೆದಿದೆ.
ಸಿ.ಪಿ.ಯೋಗೀಶ್ವರ ಕಾಯೋಣ ಕಾಯೋಣ ಎಂದಿದ್ದೇಕೆ? ಯತ್ನಾಳ ಭೇಟಿಯ ರಹಸ್ಯವೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ