Kannada NewsKarnataka NewsPolitics

*ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಲಿ: ಯತ್ನಾಳ್ ಆಗ್ರಹ*

ಪ್ರಗತಿವಾಹಿನಿ ಸುದ್ದಿ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಆಗಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರಿನಂತಹ ಸುರಕ್ಷಿತ ನಗರದಲ್ಲೇ 7 ಕೋಟಿ ದರೋಡೆ ಮಾಡಿದ್ದಾರೆ. ಇದೊಂದೇ ಪ್ರಕರಣ ಅಲ್ವ ಬಿಜಾಪುರದಲ್ಲೂ ಎರಡು ಬ್ಯಾಂಕ್ ಗಳ ದರೋಡೆ ಆಗಿದೆ. ಅಂದರೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬುದು ದೃಢವಾಗಿದ್ದು, ಗೃಹ ಮಂತ್ರಿಗಳು, ಗೊತ್ತಿಲ್ಲ ಪರಿಶೀಲನೆ ಮಾಡ್ತೀನಿ ಎಂಬ ಉತ್ತರ ಅಷ್ಟೇ ಹೇಳಿದ್ದಾರೆ. ಇದಕ್ಕೆಲ್ಲಾ ಅವರು ಸರಿಯಾಗಿ ಅವರು ತಮ್ಮ ಇಲಾಖೆಯಲ್ಲಿ ಕೆಲಸ ಮಾಡದಿರುವುದು ಕಾರಣ ಎಂದು ಕಿಡಿಕಾರಿದ್ದಾರೆ.

ಶಾಸಕರೇ ಪೊಲೀಸರ ವರ್ಗಾವಣೆಯನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಯಾವ ಅರ್ಹ ಅಧಿಕಾರಿಗಳು,ಪ್ರಾಮಾಣಿಕ ಅಧಿಕಾರಿಗಳಿಗೆ ಕೆಲಸ ಮಾಡದಿರದ ಪರಿಸ್ಥಿತಿ ಈ ಸರ್ಕಾರದಲ್ಲಿದೆ. ಕಾಂಗ್ರೆಸ್ ನವರು ಎಲ್ಲರೂ ದೆಹಲಿ ಸೇರಿಬಿಟ್ಟಿದ್ದಾರೆ. ಪರಿಣಾಮ ಜನರು ಕಷ್ಟ ಎದುರಿಸುವಂತಾಗಿದೆ ಎಂದರು.

ಡಿಕೆಶಿ ಸಿಎಂ ಆಗಬೇಕಾ.? ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯಬೇಕಾ ಅನ್ನೋ ಚರ್ಚೆಯೇ ಮುಗಿಯುತ್ತಿಲ್ಲ. ಇವರಿಬ್ಬರ ಮಧ್ಯೆ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸಿಎಂ ಮಾಡಬೇಕಾ ಎಂಬ ಗೊಂದಲ ಹೈಕಮಾಂಡ್ ನಲ್ಲಿದೆ.ರಾಜ್ಯದಲ್ಲಿ ಒಳ್ಳೆಯ ಆಡಳಿತ ಕೊಡುವಲ್ಲಿ ಸಿದ್ದರಾಮಯ್ಯ ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ.ಬೆಂಗಳೂರಲ್ಲಿ ಮಂತ್ರಿ ಗಳು ಚದರಡಿ ಕಟ್ಟಡ ನಿರ್ಮಾಣಕ್ಕೆ 75 ರೂಪಾಯಿ ಲಂಚ ತಗೊಳ್ತಿದ್ದಾರೆ.ಕಾಂಗ್ರೆಸ್ ನ ಎಲ್ಲಾ ಶಾಸಕರಿಂದ ವರ್ಗಾವಣೆ ಬಿಟ್ಟರೆ ಅಭಿವೃದ್ಧಿ ಅಂತೂ ಏನೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Home add -Advt

Related Articles

Back to top button