Latest

ದೇಶಕ್ಕಾಗಿ ಸಾಯುವ ಅವಕಾಶ ಸಿಗಲಿಲ್ಲ – ಪ್ರಧಾನಿ ಮೋದಿ

ದೇಶಕ್ಕಾಗಿ ಸಾಯುವ ಅವಕಾಶ ಸಿಗಲಿಲ್ಲ – ಪ್ರಧಾನಿ ಮೋದಿ

ಪ್ರಗತಿವಾಹಿನಿ ಸುದ್ದಿ : ಪ್ರಧಾನಿ ನರೇಂದ್ರ ಮೋದಿ ಅವರು 73 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೆಂಪು ಕೋಟೆಯಲ್ಲಿ ರಾಷ್ಟ್ರೀಯ ಧ್ವಜವನ್ನು ಅನಾವರಣಗೊಳಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಬಿಳಿಯರ ಜೊತೆ ಮಹನೀಯರು ನಡೆಸಿದ ಹೋರಾಟವನ್ನು ನೆನಪಿಸಿಕೊಳ್ಳುತ್ತಾ ಅವರ ಧೈರ್ಯ ಮತ್ತು ದೇಶ ಪ್ರೇಮವನ್ನು ಕೊಂಡಾಡಿದರು.

ಧ್ವಜಾರೋಹಣದ ನಂತರ ಪ್ರಧಾನಿ ಮೋದಿರವರು ಮಾಡಿದ ಭಾಷಣದಲ್ಲಿ ಹಲವು ವಿಚಾರಗಳನ್ನು ಜನರ ಮುಂದಿಟ್ಟರು, ಅದರಲ್ಲಿ ವಿಶೇಷವಾಗಿ, “ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ ಸಮಯದಲ್ಲಿ ತಾನು ಇನ್ನೂ ಜನಿಸಿರಲಿಲ್ಲ .. ಆದ್ದರಿಂದ ದೇಶಕ್ಕಾಗಿ ಸಾಯುವ ಅವಕಾಶ ತನಗೆ ಸಿಗಲಿಲ್ಲ, ಆದರೆ, ಭಾರತಕ್ಕಾಗಿ ಬದುಕಲು ಅವಕಾಶ ಸಿಕ್ಕಿದೆ” ಎಂದು ಭಾರತದ ಪ್ರಧಾನಿ ಸಂತಸ ವ್ಯಕ್ತಪಡಿಸಿದರು.

Related Articles

“ಭವಿಷ್ಯದ ಪೀಳಿಗೆಗೆ ಸಮಸ್ಯೆಗಳಿಲ್ಲದ ದೇಶವನ್ನು ಒದಗಿಸುವುದು ನಮ್ಮ ಉದ್ದೇಶ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ನಾವು ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತವನ್ನು ಒದಗಿಸುತ್ತಿದ್ದೇವೆ ಎಂಬುದು ನಮಗೆ ತೃಪ್ತಿ ಇದೆ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದವರ ತ್ಯಾಗ ಯಾವಾಗಲೂ ದೇಶಕ್ಕೆ ಮಾರ್ಗದರ್ಶನವಾಗಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಅವರ ಜೀವನ ಇಂದಿನ ಭಾರತಕ್ಕೆ ಮಾರ್ಗದರ್ಶನ, ಅವರ ಧೈರ್ಯ, ದೇಶ ಪ್ರೇಮವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ..ಎಂದ ಅವರು ಅಂತಹ ಮಹಾನೀಯರ ಹೆಜ್ಜೆಗಳನ್ನು ಅನುಸರಿಸಲು ಕರೆ ನೀಡಿದರು.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button