Latest

ಉದ್ಯೋಗದಲ್ಲಿ ಕೌಶಲ ವೃದ್ಧಿಗೆ ಆದ್ಯತೆ ನೀಡಿ; ಡಿಸಿ ನಿತೇಶ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸೇವೆ ಮತ್ತು ಉತ್ಪಾದನಾ ವಲಯದಲ್ಲಿ ಪ್ರಸ್ತುತ ವಿಪುಲ ಉದ್ಯೋಗಾವಕಾಶಗಳಿದ್ದು, ಉದ್ಯೋಗಾಕಾಂಕ್ಷಿಗಳು ತಮ್ಮ ಕೌಶಲ ವೃದ್ಧಿಸಿಕೊಂಡು  ಉದ್ಯೋಗದಲ್ಲಿ ಯಶಸ್ಸು ಸಾಧಿಸಬೇಕು” ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕರೆ ನೀಡಿದರು.

ಕೌಶಲಾಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ವತಿಯಿಂದ ನಗರದ ಮರಾಠಾ ಮಂಡಲದ ಕಲಾ, ವಿಜ್ಞಾನ ಹಾಗೂ ಗೃಹವಿಜ್ಞಾನ ಮಹಾವಿದ್ಯಾಲಯದಲ್ಲಿ ಸರ್ವರಿಗೂ ಉದ್ಯೋಗ ಅಭಿಯಾನದಡಿ ಗುರುವಾರ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ವಿದ್ಯಾರ್ಥಿ ಜೀವನದ ಬಳಿಕ ನಮ್ಮ ಹೆಸರಿನ ಜತೆ ನಮ್ಮ ಕೆಲಸ ಹಾಗೂ ಪದನಾಮ ಮಹತ್ವ ಪಡೆದುಕೊಳ್ಳುತ್ತದೆ. ಉದ್ಯೋಗ ಅಥವಾ ವೃತ್ತಿಯೇ ವ್ಯಕ್ತಿಯ ಗುರುತಾಗುತ್ತದೆ. ಆದ್ದರಿಂದ ಆತ್ಮವಿಶ್ವಾಸ, ಕಠಿಣ ಪರಿಶ್ರಮದ ಮೂಲಕ ಉತ್ತಮ ಉದ್ಯೋಗಾವಕಾಶ ಪಡೆದುಕೊಳ್ಳಬೇಕು” ಎಂದರು.

ತಾವು ವಿಜಯಪುರ ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತರೂ ನಿರಂತರ ಪ್ರಯತ್ನದ ಫಲವಾಗಿ ನಾಗರಿಕ ಸೇವೆಯಲ್ಲಿ ಉನ್ನತ ಹುದ್ದೆ ಪಡೆಯಲು ಸಾಧ್ಯವಾಯಿತು ಎಂದು ತಮ್ಮನ್ನೇ ಉದಾಹರಿಸಿಕೊಂಡ ಅವರು, ಸರಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಅನೇಕ ಕೆಲಸಗಳು ದೊರೆತು. ವಿದೇಶಗಳಿಗೆ ಹೋಗುವ ಅವಕಾಶವಿದ್ದರೂ ತಾವು ತಮ್ಮ ಕನಸಿನಂತೆ ನಾಗರಿಕ ಸೇವಾ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾಗಿ ಅವರು

ಉದ್ಯೋಗ ಮೇಳದಲ್ಲಿ ಒಟ್ಟಾರೆ 38 ಕಂಪೆನಿಗಳು ಭಾಗವಹಿಸಿದ್ದು,
3500 ಜನರು ನೋಂದಣಿ ಮಾಡಿಸಿದ್ದಾರೆ. ಎಲ್ಲರೂ ತಮ್ಮ ಕೌಶಲಾಧಾರಿತವಾಗಿ ಉದ್ಯೋಗ ಪಡೆಯಬಹುದಾಗಿದ್ದು ಇದು ಆಯ್ಕೆಯಾಗದವರಿಗೆ ಹೆಚ್ಚಿನ ಅನುಭವ ನೀಡಲಿದೆ ಎಂದರು.

ಜಿಲ್ಲಾ ಖಜಾನೆಯ ಜಂಟಿ ನಿರ್ದೇಶಕ ಸುರೇಶ ಹಲ್ಯಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಜಿಲ್ಲಾ ಕೌಶಲಭಿವೃದ್ಧಿ ಅಧಿಕಾರಿ ಡಾ.ಬಸವಪ್ರಭು ಹಿರೇಮಠ, ಮರಾಠಾ ಮಂಡಲದ ಕಲಾ, ವಿಜ್ಞಾನ ಹಾಗೂ ಗೃಹವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಗಜಾನನ ಬೆನ್ನಾಳಕರ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ‌ ನಿರ್ದೇಶಕ ಗುರುಪಾದಯ್ಯ ಹಿರೇಮಠ, ಕೌಶಲಾಭಿವೃದ್ಧಿ ಇಲಾಖೆಯ ಸಹಾಯಕ ನಿಯಂತ್ರಕರು ಶಿಲ್ಪಾ ವಾಲಿ ಮತ್ತಿತರರು ಉಪಸ್ಥಿತರಿದ್ದರು.

ಉದ್ಯೋಗಮೇಳದಲ್ಲಿ ಭಾಗವಹಿಸಿದ್ದ ಟಾಟಾ ಕ್ಯಾಪಿಟಲ್, ಐಸಿಐಸಿ ಬ್ಯಾಂಕ್, ಅದಾನಿ ಕ್ಯಾಪಿಟಲ್, ಪೇಟಿಎಂ ಪ್ರೈ. ಲಿ., ಬೈಜೂಸ್, ಆಶೋಕ್ ಐರನ್ ಗ್ರುಪ್ ಸೇರಿದಂತೆ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ 38 ಕಂಪೆನಿಯವರು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು. ಹೆಸರು ನೋಂದಾಯಿಸಿದ್ದ ಬೆಳಗಾವಿ ಜಿಲ್ಲೆಯ ಒಟ್ಟಾರೆ 3500 ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಉದ್ಯೋಗಮೇಳದಲ್ಲಿ ಪಾಲ್ಗೊಂಡಿದ್ದರು.

 

https://pragati.taskdun.com/cm-basavaraj-bomaiyadagiri-neeravari-dashaka/

ಮಹಿಳೆಯರಿಗೆ ಹಕ್ಕು, ಜವಾಬ್ದಾರಿ ಅರಿವು ಕಾರ್ಯಕ್ರಮ

https://pragati.taskdun.com/rights-responsibilities-awareness-program-for-women/

SP ಮುಖಂಡನ ಮಗಳೊಂದಿಗೆ ಬಿಜೆಪಿ ನಾಯಕ ಪರಾರಿ

https://pragati.taskdun.com/bjp-leader-absconded-with-sp-leaders-daughter/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button