Belagavi NewsBelgaum NewsCrimeKannada NewsKarnataka NewsLatest

*ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಕೈದಿಯ ಬಂಧನ*

ಪ್ರಗತಿವಾಹಿನಿ ಸುದ್ದಿ: ಕಲಬುರಗಿಯ ಕೇಂದ್ರೀಯ ಕಾರಾಗೃಹದಿಂದ ಪರಾರಿಯಾಗಿದ್ದ ಕೈದಿಗಳ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿ ಮತ್ತೆ ಅದೇ ಜೈಲಿಗೆ ಹಾಕಿದ್ದಾರೆ. 

ಪರಾರಿಯಾಗಿದ್ದ ಕೈದಿ ಸಾಗರ್ ಭೀಮರಾಯ (26) ಎಂಬಾತನನ್ನು ಬೀದ‌ರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಬಸ್‌ ನಿಲ್ದಾಣದ ಯಲ ಪೊಲೀಸರು ಜಾಲ ಬೀಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Home add -Advt

ಜು‌.14ರಂದು ಬೆಳಗಿನ ಜಾವ ಇವನೊಂದಿಗೆ ಸಹ ಕೈದಿಗಳಾಗಿದ್ದ ಸಂತೋಷ್ ಹಾಗೂ ಮಸ್ತಾನ್ ಎಂಬುವವರು ಸೇರಿಕೊಂಡು ಕಲಬುರಗಿ ಜೈಲಿನಿಂದ ಗೋಡೆ ಹಾರಿ ತಪ್ಪಿಸಿಕೊಂಡಿದ್ದರು. ಈ ಘಟನೆ ರಾಜ್ಯ ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು ಮತ್ತು ಕೈದಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಜೈಲಿನಿಂದ ಎಸ್ಕೆಪ್ ಆದಾಗಿನಿಂದಲೂ ಪೊಲೀಸರ ಕಣ್ಣಿಗೆ ಮಣ್ಣು ಎರೆಸಿ ಅಡಗಿದ್ದ ಸಾಗರ್, ಭಾಲ್ಕಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಹೈದರಾಬಾದ ಪರಾರಿಯಾಗಲು ಸಂಚು ರೂಪಿಸಿದ್ದನು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೀದರ್ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಬಸ್ ನಿಲ್ದಾಣವನ್ನು ಸುತ್ತುವರೆದು ಆತನನ್ನು ವಶಕ್ಕೆ ಪಡೆದಿದ್ದಾರೆ. 

Related Articles

Back to top button