Kannada NewsLatest

*ಕಾರಾಗೃಹದಲ್ಲೇ ಆತ್ಮಹತ್ಯೆಗೆ ಶರಣಾದ ಕೈದಿ*

ಪ್ರಗತಿವಾಹಿನಿ ಸುದ್ದಿ; ಗೋಕಾಕ್: ವಿಚಾರಾಣಾಧೀನ ಕೈದಿಯೊಬ್ಬ ಕಾರಾಗೃಹದ ಸೆಲ್ ಹೊರಭಾಗದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ನಡೆದಿದೆ.

ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಮೋದಿನಾಲಿ ಗೋಟೆ (24) ಮೃತ ವ್ಯಕ್ತಿ. ಉಪಕಾರಾಗೃಹದ ಹೊರಭಾಗದಲ್ಲಿನ ಕಟ್ಟಿಗೆ ಜಂತಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೊಲೆ ಆರೋಪದಲ್ಲಿ ಹಿಂಡಲಗಾ ಜೈಲು ಪಾಲಾಗಿದ್ದ ಆರೋಪಿ ಗೋಟೆಯನ್ನು 15 ದಿನಗಳ ಹಿಂದಷ್ಟೇ ಗೋಕಾಕ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ಇದೀಗ ಕಾರಾಗೃಹದ ಹೊರಭಾಗದಲ್ಲೇ ನೇಣಿಗೆ ಕೊರಳೊಡ್ಡಿದ್ದಾನೆ. ಗೋಕಾಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ ಎಂ.ಜಿ.ಹಿರೇಮಠ

Home add -Advt

 

https://pragati.taskdun.com/mg-hiremath-as-belgaum-regional-commissioner/

Related Articles

Back to top button