Latest

ಹಿಜಾಬ್ V/Sಕೇಸರಿ ಶಾಲು ವಿವಾದ; ದೇವರ ಮೊರೆಹೋದ ಭಕ್ತ

ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ರಾಜ್ಯದಲ್ಲಿ ತಾರಕಕ್ಕೇರಿದ್ದು, ಇದೀಗ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಈ ನಡುವೆ ಭಕ್ತನೊಬ್ಬ ದೇವರ ಮೊರೆ ಹೋಗಿರುವ ಘಟನೆ ನಡೆದಿದೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನ ಹಳ್ಳಿ ದುರ್ಗಾಂಬಿಕಾ ರಥೋತ್ಸವ ನಡೆಯುತ್ತಿದ್ದು, ಸಾಮರಸ್ಯ ಸಂದೇಶ ಸಾರುವ ಬಾಳೆಹಣ್ಣನ್ನು ರಥಕ್ಕೆ ಎಸೆದು, ವಿವಾದ ಅಂತ್ಯವಾಗಿ ಸೌಹಾರ್ದತೆ ಮೂಡಲಿ ಎಂದು ಪ್ರಾರ್ಥಿಸಿದ್ದಾನೆ.

ಬಾಳೆ ಹಣ್ಣಿನ ಮೇಲೆ ಜಾತಿಯತೆ ಅಳಿಯಲಿ, ಸಮಾನತೆ ಬೆಳೆಯಲಿ ಎಂದು ಬರೆಯಲಾಗಿದ್ದು, ರಥಕ್ಕೆ ಬಾಳೆ ಹಣ್ಣು ಎಸೆದು ರಾಜ್ಯದಲ್ಲಿ ಎದ್ದಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಬಗೆಹರಿದು ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾನೆ.

ಶಾಲೆಗಳಿಗೆ ರಜೆ; ಸಂಜೆಯೇ ನಿರ್ಧಾರ – ಸಿಎಂ ಬೊಮ್ಮಾಯಿ

Related Articles

Back to top button