Belagavi NewsBelgaum NewsLatestNationalPolitics

*ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸಂಸತ್ ಕಲಾಪ ವೀಕ್ಷಣೆ ಭಾಗ್ಯ ಕಲ್ಪಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ ಶಾಲಾ, ಕಾಲೇಜುಗಳ 15 ವಿದ್ಯಾರ್ಥಿನಿಯರಿಗೆ ಸಂಸತ್ ಕಲಾಪ ವೀಕ್ಷಣೆಗಾಗಿ ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನದ ಮೂಲಕ ಕರೆದೊಯ್ಯಲು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಅವರು ಮುಂದಾಗಿದ್ದಾರೆ.

ಡಿ. 15ರಂದು ಬೆಳಗ್ಗೆ 8.45ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರೊಂದಿಗೆ ವಿದ್ಯಾರ್ಥಿನಿಯರು ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಕೋಮಲಾ ಹವಾಲ್ದಾರ, ದಾನೇಶ್ವರಿ ಚೌಗಲಾ, ಸ್ನೇಹಾ ಪೂಜೇರಿ, ಸೃಷ್ಟಿ ಪಡೋಲ್ಕರ್‌, ಅಮೃತಾ ತೆರಣಿ, ವಿಶಾಲಾಕ್ಷಿ ಶೇಲಾರ, ರೂಪಾ ಹಡಗಿನಾಳ, ನಿರ್ಮಿತಾ ಸವದತ್ತಿ, ರೇವತಿ ಮಾದರ, ಸೃಷ್ಟಿ ಅಕ್ಕಿವಾಟೆ, ಸಂಜನಾ ಪಾಟೀಲ, ಐಶ್ವರ್ಯಾ ಪಾಟೀಲ, ಕಾವೇರಿ ಮಲ್ಲಾಪುರೆ ಮತ್ತಿತರರು ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.

Home add -Advt

ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಚಳಿಗಾಲದ ಅಧಿವೇಶನ ವೀಕ್ಷಿಸಲು ಆಯ್ದ ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಅವಕಾಶ ಇದೆ. ಅದೇ ರೀತಿ ನವದೆಹಲಿಯಲ್ಲಿ ನಡೆಯುವ ಸಂಸತ್‌ ಕಲಾಪಗಳನ್ನು ವೀಕ್ಷಿಸಲು ಅವಕಾಶ ಸಿಗಲಿ ಎಂಬ ಉದ್ದೇಶದಿಂದ ವಿದ್ಯಾರ್ಥಿನಿಗಳನ್ನು ನವದೆಹಲಿಗೆ ಕರೆದೊಯ್ಯಲಾಗುತ್ತಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ತಿಳಿಸಿದ್ದಾರೆ.

Related Articles

Back to top button