Kannada NewsLatestPolitics

ಕೆ.ಎಸ್.ಸಿ.ಎಸ್.ಟಿ. 6 ಪ್ರಾಜೆಕ್ಟ್ ಗಳು  ರಾಜ್ಯ ಮಟ್ಟದ ಅಂತಿಮ ಸ್ಪರ್ಧೆಗೆ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ:
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಆಯ್ ಆಯ್ ಎಸ್ ಸಿ ಕ್ಯಾಂಪಸ್ ಬೆಂಗಳೂರು ಹಮ್ಮಿಕೊಂಡ ರಾಜ್ಯ ಮಟ್ಟದ ಅಂತಿಮ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಚಿಕ್ಕೋಡಿಯ ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸಿದ್ದಪಡಿಸಿದ 6 ಪ್ರಾಜೆಕ್ಟಗಳು ಆಯ್ಕೆಯಾಗಿವೆ  ಎಂದು ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ತಿಳಿಸಿದ್ದಾರೆ.
ಸಿವಿಲ್ ವಿಭಾಗದ 02, ಇಲೇಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ 02, ಮೆಕ್ಯಾನಿಕಲ್ ವಿಭಾಗದ 01 ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ 01 ಪ್ರಾಜೆಕ್ಟ ಆಯ್ಕೆಯಾಗಿವೆ. ಈ ಪ್ರಾಜೆಕ್ಟಗಳಿಗೆ ಪ್ರೊ. ಸುನೀಲ ಹೆಬ್ಬಾಳೆ, ಪ್ರೊ. ನಿಶಾಂತ ಭೋಜಿ, ಪ್ರೊ ಪ್ರವೀಣ ಗುರವ, ಪ್ರೊ. ಮಹೆಶ್ವರಿ ಬಿಸನಾಳ ಮಾರ್ಗದರ್ಶನ ನೀಡಿದ್ದು
ಪ್ರಾಜೆಕ್ಟ ಸಿದ್ದಪಡಿಸಿದ ವಿದ್ಯಾರ್ಥಿಗಳು ಬೆಳಗಾವಿಯ ಕೆ.ಎಲ್.ಇ ಎಮ್.ಎಸ್. ಶೇಷಗಿರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜುಲೈ 26 ಮತ್ತು 27 ರಂದು ನಡೆಯುವ ಅಂತಿಮ ಸ್ಪರ್ಧೆಗೆ ಭಾಗವಹಿಸಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button