*ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ನೂಕಿದ್ದ ಹೆತ್ತ ತಾಯಿ ಪ್ರಕರಣ; ನಾಲ್ವರು ದೋಷಿಗಳು ಎಂದು ಕೋರ್ಟ್ ತೀರ್ಪು*
ಪ್ರಗತಿವಾಹಿನಿ ಸುದ್ದಿ: ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಕುಂಚೇಬೈಲ್ ಬಳಿಯ ಗೋಚವಲ್ಲಿ ಗ್ರಾಮದಲ್ಲಿ ನಡೆದಿದ್ದ ಹಣಕ್ಕಾಗಿ ಮಗಳನ್ನೇ ವೇಶಾವ್ಯಾಟಿಕೆಗೆ ತಳ್ಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ತಾಯಿ ಸೇರಿ ನಾಲ್ವರನ್ನು ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ.
ಪ್ರಕರ್ಣದಲ್ಲಿ ೫೩ ಜನರನ್ನು ಬಂಧಿಸಲಾಗಿತ್ತು. ೫೩ ಆರೋಪಿಗಳಲ್ಲಿ ೪೯ ಆರೋಪಿಗಳನ್ನು ಖುಲಾಸೆಗೊಳಿಸಿರುವ ಕೋರ್ಟ್ ನಾಲ್ವರು ಆರೋಪ ಸಾಬೀತಾಗಿದೆ. ಮಾರ್ಚ್ ೧೧ ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದೆ.
ಚಿಕ್ಕಮಗಳೂರಿನ ವಿಶೇಷ ಪೋಕ್ಸೋ ಕೋರ್ಟ್ ಈ ತೀರ್ಪು ನೀಡಿದೆ. ಸಂತ್ರಸ್ತೆಯ ತಾಯಿ ಗೀತಾ, ಸಲ್ಮಾನ್ ಅಭಿ, ಗಿರೀಶ್, ದೇವಿ ಶರಣ್ ಅಪರಾಧಿಗಳು.
ಹಣದ ಆಸೆಗಾಗಿ ಹೆತ್ತ ತಾಯಿಯೇ ತನ್ನ ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಳು. ೨೦೨೦ರ ಸೆಪ್ಟೆಂಬರ್ ೧ರಿಂದ ೨೦೨೧ರ ಜನವರಿ ೨೭ರವರೆಗೆ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆದಿತ್ತು . ಗೋಚುವಲ್ಲಿ ಗ್ರಾಮದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಸಂತ್ರಸ್ತ ಬಲಕಿಯನ್ನು ರಕ್ಷಿಸಿದ್ದರು. ಪ್ರಕರಣದಲ್ಲಿ ೫೩ ಆರೋಪಿಗಳನ್ನು ಬಂಧಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ