Kannada NewsKarnataka News

ನೀರಲ್ಲಿ ಮುಳುಗಿದ ಓರ್ವನ ರಕ್ಷಣೆ, ಮತ್ತೊಬ್ಬನಿಗೆ ಶೋಧ

ಪ್ರಗತಿವಾಹಿನಿ ಸುದ್ದಿ, ರಾಮದುರ್ಗ: ತುರನೂರು ಗ್ರಾಮದ ಜಾತ್ರೆಗೆಂದು ಆಗಮಿಸಿದ್ದ ಯುವಕರಿಬ್ಬರು ನದಿ ಸ್ನಾನಕ್ಕೆಂದು ತೆರಳಿದ್ದಾಗ ನೀರಿನ ಸೆಳವಿಗೆ ಸಿಲುಕಿದ್ದರು. ಇಬ್ಬರಲ್ಲಿ ಓರ್ವನನ್ನು ರಕ್ಷಿಸಲಾಗಿದ್ದು, ಮತ್ತೋರ್ವನಿಗಾಗಿ ಶೋಧ ನಡೆದಿದೆ.
ಮೂಲತಃ ತುರನೂರಿನವರಾದ ಅಭಿಲಾಷ ಶ್ರೀಧರ ದೀಪಾಲಿ (15), ಮಣಿಕಂಠ ವಸಂತ ದೀಪಾಲಿ (22) ಸ್ನಾನಕ್ಕೆಂದು ನದಿಗೆ ಇಳಿದ್ದಾರೆ. ನೀರಿನ ಸೆಳವಿಗೆ ಸಿಲುಕಿದ್ದ ಇಬ್ಬರಲ್ಲಿ ಮಣಿಕಂಠ ಎಂಬುವನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೊಬ್ಬನಿಗಾಗಿ ಶೋಧ ಕಾರ್ಯ ನಡೆದಿದೆ.
ರಾಮದುರ್ಗದ ಪೊಲೀಸರು, ಅಗ್ನಿ ಶಾಮಕದಳ ಮತ್ತು ಸಾರ್ವಜನಿಕರು ಅಭಿಲಾಷ ಎಂಬ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ.

Related Articles

Back to top button