Kannada NewsKarnataka News

ಕೇಂದ್ರ ಸರ್ಕಾರದ  ವ್ಯಾಪಾರ ಒಪ್ಪಂದ ನೀತಿ ವಿರೋಧಿಸಿ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರ ಸರ್ಕಾರದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇರ್ಪಡೆ ಮಾಡದಿರಲು ಕೋರಿ, ಸೋಮವಾರ ಬೆಳಗಾವಿ ಜಿಲ್ಲೆಯ ಹಾಲು ಉತ್ಪಾದಕರು, ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪಾದಯಾತ್ರೆ ನಡೆಸಿದರು.

ಕೇಂದ್ರ ಸರ್ಕಾರವು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಒಪ್ಪಂದ ಜಾರಿಗೆ ಬಂದಲ್ಲಿ ಹಾಲು ಉತ್ಪಾದಕರಿಗೆ ಹಾಗೂ ಸಹಕಾರಿ ಹೈನು ಉದ್ಯಮಕ್ಕೆ ಆರ್ಥಿಕವಾಗಿ ಪ್ರಬಲವಾದ ಹಿಂಜರಿತ ಉಂಟಾಗುವ ಬಗ್ಗೆ ತಿಳಿಸಿ, ಜಿಲ್ಲಾಧಿಕಾರಿಗಳ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಅಲ್ಲದೇ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದ ಪ್ರಧಾನ ಮಂತ್ರಿಗಳಿಗೆ ಈ ನೀತಿ ಜಾರಿಗೆ ತರದೇ ಇರುವಂತೆ ಒತ್ತಡವನ್ನು ಪತ್ರ ಮುಖೇನ ಸುಮಾರು ೪೦೦೦೦ ಹಾಲು ಉತ್ಪಾದಕರು ನಿವೇದನೆ ಸಲ್ಲಿಸಲಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ವಿವೇಕ ವಿ. ಪಾಟೀಲ ತಿಳಿಸಿದರು.

ಜಾಥಾದಲ್ಲಿ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ  ವಿವೇಕ ವಿ. ಪಾಟೀಲ ಆಡಳಿತ ಮಂಡಳಿ ಸದಸ್ಯರುಗಳಾದ ಕಟ್ಟಿ,  ಮುಗಳಿ,  ಶಿಂಧೆ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ,  ರಾಯಪ್ಪ ಡೂಗ  ಪಾಲ್ಗೊಂಡಿದ್ದರು.

Home add -Advt

ಪಾದಯಾತ್ರೆಯಲ್ಲಿ ಅಂದಾಜು ೨೫೦೦ ಹಾಲು ಉತ್ಪಾದಕರು ಪಾಲ್ಗೊಂಡು ಕೇಂದ್ರ ಸರ್ಕಾರದದ ನೀತಿ ವಿರುದ್ಧ ಘೋಷಣೆ ಕೂಗಿದರು.

Related Articles

Back to top button