Kannada NewsKarnataka News

3 ಕುರಿಗಳನ್ನು ಬಲಿ ಪಡೆದ ಹುಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಖಾನಾಪುರ ತಾಲೂಕಿನ ನಂದಗಡ ಗ್ರಾಮದ ವಡೇಮಾಳ ಗುಡ್ಡದಲ್ಲಿ ಹುಲಿಯೊಂದು 3 ಕುರಿಗಳನ್ನು ತಿಂದು ಹಾಕಿದೆ.

ನಂದಗಡದ ದೇಮಣ್ಣ ಖನಗಾವಿ ಅವರ ಜಮೀನ ಸರ್ವೆ ನಂ.೨೨೩ ರಲ್ಲಿ ಮಂಗಳವಾರ ಮೂರು ಕುರಿಗಳನ್ನು ತಿಂದಿದ್ದು,  ಸಮೀಪದಲ್ಲಿದ್ದ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Home add -Advt

ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರ ಕಾರ್ಯಕರ್ತರಾದ ಬಾಬು ಹತ್ತರವಾಡ, ಮಹಾಂತೇಶ ಕಲ್ಯಾಣಿ, ರುದ್ರಪ್ಪ ಪಾಟೀಲ ಅವರು  ರೈತನ ಆರೋಗ್ಯ ಮತ್ತು ಘಟನೆಯ ಕುರಿತು ವಿವರ ಪಡೆದಿದ್ದಾರೆ.  ಘಟನೆಯಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.

Related Articles

Back to top button