Belagavi NewsBelgaum NewsKannada News

*ದೇಶ ರಕ್ಷಕ ಸೈನಿಕರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಹೆಮ್ಮೆ; ಮಹಾಂತೇಶ ಕೌಜಲಗಿ*

ಪ್ರಗತಿವಾಹಿನಿ ಸುದ್ದಿ: ದೇಶ ರಕ್ಷಕ ಸೈನಿಕರ, ನಿವೃತ್ತ ಸೈನಿಕರ ಕಾರ್ಯಕ್ರಮಗಳಲ್ಲಿ ಪಾಲ್ಗೊಳುವದರಿಂದ ಆತ್ಮಸ್ಥೈರ್ಯ ಹೆಚ್ಚಾಗಿ ಹೆಮ್ಮೆ ಅನಿಸುತ್ತದೆ ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಅವರು ಬುಧವಾರ ನೇಸರ್ಗಿ ಗ್ರಾಮದ ಶ್ರೀ ಚನ್ನವೃಷಬೇಂದ್ರ ದೇವರಕೊಂಡ ಅಜ್ಜನವರ ಮಠದಲ್ಲಿ ಆಯೋಜಿಸಲಾಗಿದ್ದ ಮಾಜಿ ಸೈನಿಕರ ಸಂಘ ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ನಿಮ್ಮ ಕೆಲಸ ಕಾರ್ಯ, ಸಮಾಜ ಕಾರ್ಯ ಕೆಲಸಗಳಿಗೆ ಬೆನ್ನೆಲುಬಾಗಿ ಇರುತ್ತೇವೆ ಎಂದರು.

ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ದೇಶ ಕಾಯುವ ಸೈನಿಕ ಹಾಗೂ ಅನ್ನದಾತ ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ. ಸಮಾಜ ಸುಧಾರಣೆ, ಗ್ರಾಮೀಣ ಅಭಿವೃದ್ಧಿ, ಸಾರ್ವಜನಿಕರ ಸಹಾಯಕ್ಕೆ ಪ್ರಾರಂಭವಾಗಿರುವ ಸೈನಿಕರ ಸಂಘ ಉನ್ನತ ಮಟ್ಟದಲ್ಲಿ ಬೆಳೆದು ಜನಸೇವೆ ಮಾಡಲಿ ಎಂದರು.

ಮಾಜಿ ಜಿ ಪಂ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ ಮಾತನಾಡಿ ಇಂದು ವಿಶೇಷವಾಗಿ ಮಹಿಳೆಯರ ದಿನ ಇಷ್ಟೊಂದು ಮಹಿಳೆಯರು ಸೇರಿದ್ದು ಖುಷಿ ತಂದಿದೆ,. ನಿಮ್ಮ ಸಾರ್ವಜನಿಕ ಸೇವಗೆ ಸದಾ ನಮ್ಮ ಸಹಕಾರ ಇರುತ್ತದೆ ಎಂದರು.

ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು, ಹಣಬರಹಟ್ಟಿ ಮಠದ ಶ್ರೀ ಬಸವಲಿಂಗ ಶಿವಾಚಾರ್ಯ, ಶಾಲೆಯ ಮುಖ್ಯೋಪಾಧ್ಯಾಯ ಹ್ಯಾರಿ ವಿಕ್ಟರ ಡಿಕ್ರೊಸ್, ಸಿ ವಿ.ಕಟ್ಟಿಮನಿ ಇವರುಗಳು ಸೈನಿಕರ ತ್ಯಾಗ,ಬಲಿದಾನ , ಸೇವೆ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾ ಪಂ ಅದ್ಯಕ್ಷ ನಿಂಗಪ್ಪ ಮಾಳಣ್ಣವರ, ಕೆಂಚಪ್ಪ ಕಳ್ಳಿಬಡ್ಡಿ, ಮೌಲಾನಾ ಬಾಗವಾನ, ಮಲ್ಲಿಕಾರ್ಜುನ ಮದನಬಾವಿ. ಬಾಳಪ್ಪ ರೊಟ್ಟಿ, ಚನ್ನಪ್ಪ ದಿನ್ನಿಮನಿ, ಕೃಷ್ಣಾ ಬಡಿಗೇರ, ಸಂಘದ ಅದ್ಯಕ್ಷರಾದ ಈರಪ್ಪ ಮಾಳಣ್ಣವರ, ಉಪಾದ್ಯಕ್ಷ ಕಾಡಪ್ಪ ಗಡದವರ, ಕಾರ್ಯದರ್ಶಿ ಮಹಾದೇವ ಹಂಚಿನಮನಿ, ಅಡಿವಪ್ಪ ಮಾಳಣ್ಣವರ, ನಿವೃತ್ತ ಸೈನಿಕರಾದ ಮಹಾದೇವ ಲೆಂಕೆನ್ನವರ, ಮಲ್ಲಿಕಾರ್ಜುನ ಕಲ್ಲೊಳಿ, ಪುಂಡಲೀಕ ರೊಟ್ಟಿ, ಮಲ್ಲಿಕಾರ್ಜುನ ಕಲ್ಲೊಳಿ, ಮಲ್ಲಿಕಾರ್ಜುನ ಮುತವಾಡ,ಹಾಗೂ ಮಂಜುನಾಥ ಹುಲಮನಿ, ಸುರೇಶ್ ಅಗಸಿಮನಿ, ಬಸವರಾಜ ಚಿಕ್ಕನಗೌಡ್ರ, ರಾಜು ಮದನಬಾವಿ, ನಿಜಗುಣ ತುಮ್ಮರಗುದ್ದಿ, ಈರಪ್ಪ ಕಾರಜೋಳ, ಬಸವರಾಜ ಕೊಳದೂರ, ಅಶೋಕ ಹತ್ತರಗಿ, ಮಹಾಂತೇಶ ಸತ್ತಿಗೇರಿ, ಈರಣ್ಣ ಮಾಳಣ್ಣವರ, ಮಲ್ಲಿಕಾರ್ಜುನ ಸೋಮಣ್ಣವರ, ಕೆಂಚಪ್ಪ ತರಗಾರ, ಬಾಳಪ್ಪ ಹಂಚಿನಮನಿ, ಯಲ್ಲಪ್ಪ ರೊಟ್ಟಿ, ಬಸನಾಯ್ಕ ನಾಯ್ಕರ, ರುದ್ರಗೌಡ ಪಾಟೀಲ, ಈರಪ್ಪ ಪಾಟೀಲ, ಬರಮಗೌಡ ಪಾಟೀಲ, ಅಪ್ಪಯ್ಯಪ್ಪ ಬೆನಕನ್ನವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವೃತ್ತ ಸೈನಿಕರು, ವೃತ್ತಿನಿರತ ಸೈನಿಕರು, ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು. ಶಿಕ್ಷಕರಾದ ಮಂಜುನಾಥ ಚೋಬಾರಿ ಹಾಗೂ ರಾಜಶೇಖರ ಗೆಜ್ಜಿ ನಿರೂಪಿಸಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button