ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಿಎಸ್ ಐ ಹುದ್ದೆ ನೇಮಕಾತಿಗಾಗಿ ಶಾಸಕರ ವಿರುದ್ಧ ಲಂಚ ಆರೋಪಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಶಾಸಕರ ವಿರುದ್ಧ ಆರೋಪ ಮಾಡಿದ್ದ ಪರಸಪ್ಪ ಇದೀಗ ಉಲ್ಟಾ ಹೊಡೆದಿದ್ದು, ಅದು ಹಣವಲ್ಲ, ಹಣ್ಣಿನ ಚೀಲ ಎಂದು ಯೂಟರ್ನ್ ಹೊಡೆದಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಪರಸಪ್ಪ, ವೈರಲ್ ಆಗಿರುವ ಆಡಿಯೋ, ವಿಡಿಯೋ ಪ್ರಕರಣದಲ್ಲಿ ಶಾಸಕರ ಪಾತ್ರವಿಲ್ಲ. ಶಾಸಕರು ಯಾವುದೇ ಲಂಚದ ಹಣವನ್ನೂ ಪಡೆದಿಲ್ಲ. ಶಾಸಕ ಬಸವರಾಜ್ ದಡೇಸೂಗೂರು ನಮ್ಮ ಕುಲಬಾಂಧವರು ಎಂದು ಹೇಳಿದ್ದಾರೆ.
ಈ ಮೂಲಕ ಮಗನ ಪಿಎಸ್ ಐ ಹುದ್ದೆ ನೇಮಕಾತಿಗೆ ಶಾಸಕ ದಡೇಸೂಗೂರು ಅವರು 15 ಲಕ್ಷ ಹಣ ಪಡೆದಿದ್ದರು ಎಂದು ಆರೋಪ ಮಾಡಿದ್ದ ಸ್ವತ: ಪರಸಪ್ಪ ಇದೀಗ ಉಲ್ಟಾ ಹೇಳಿಕೆ ಕೊಟ್ಟಿದ್ದು ಪ್ರಕರಣ ಹೊಸ ತಿರುವು ಪಡೆದಿದೆ.
ಶಾಸಕರ ಸಂಬಂಧಿ ಆನಂದಪ್ಪ ಎಂಬುವವರ ಜೊತೆಗೆ ಜಮೀನು ವ್ಯವಹಾರವಿತ್ತು. ಈ ಬಗ್ಗೆ ಶಾಸಕರನ್ನು ಭೇಟಿಯಾಗಿದ್ದೆವು. ಜಮೀನು ವ್ಯವಹಾರ ಸಂಬಂಧ ಹಣ ಸಂದಾಯ ವಿಚಾರವಾಗಿ ಫೋನ್ ನಲ್ಲಿ ಮಾತನಾಡಿದ್ವಿ. ಜಮೀನು ವ್ಯವಹಾರ ವಿಚಾರವಾಗಿ ಸಂಭಾಷಣೆ ವೇಳೆ ಶಾಸಕರು ಏರು ಧ್ವನಿಯಲ್ಲಿ ಮಾತನಾಡಿದ್ದರು. ಈಗ ಆಡೀಯೋ, ವಿಡಿಯೋವನ್ನು ತಿರುಚಿ ಶಾಸಕರ ವಿರುದ್ಧ ಷಡ್ಯಂತ್ರ ಮಾಡಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಶಾಸಕರ ಭೇಟಿಗೆ ತೆರಳಿದ್ದಾಗ ಹಣ್ಣು ಇದ್ದ ಬ್ಯಾಗ್ ಕೊಟ್ಟು ಫೋಟೋ ತೆಗೆಸಿಕೊಂಡಿದ್ದೆವು. ಈಗ ಆ ಫೋಟೋವನ್ನು ತಿರುಚಿ ಹಣ್ಣಿದ್ದ ಬ್ಯಾಗನ್ನು ಹಣವಿದ್ದ ಬ್ಯಾಗ್ ಎಂಬ ರೀತಿ ಬಿಂಬಿಸಿದ್ದಾರೆ. ಸ್ನಾನು ಯವುದೇ ಲಂಚವನ್ನು ಕೊಟ್ಟಿಲ್ಲ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಇದು ಶಾಸಕರ ವಿರುದ್ಧ ನಡೆಸಿರುವ ಷಡ್ಯಂತ್ರ ಎಂದು ಹೇಳಿದ್ದಾರೆ.
https://pragati.taskdun.com/politics/vidhanasabhebangalore-floodsiddaramaiaharavinda-limbavali/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ