Latest

ಪುನೀತ್ ಕನ್ನಡಿಗರ ಮನಸ್ಸಿನಲ್ಲಿ ಎಂದೆಂದಿಗೂ ಅಮರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯುವಕರ ನೆಚ್ಚಿನ ನಟನಾದ ಪುನೀತ್‌ ಅವರ ಅಗಲಿಕೆ ಬಹಳ ದು:ಖ ತಂದಿದೆ. ಯುವಕರಿಗೆ ವ್ಯಾಯಾಮ ಹಾಗೂ ಯೋಗದಲ್ಲಿ ಆದರ್ಶವಾಗಿದ್ದರು. ಯಾವುದೇ ಗರ್ವವಿಲ್ಲದೆ, ಎಲ್ಲರೊಂದಿಗೆ ಬೆರಯುತ್ತಿದ್ದ ಪುನೀತ್‌ರಾಜಕುಮಾರ್‌ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಬೆಳಗಾವಿ ಜಿಲ್ಲೆ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಇಂದಿಲ್ಲಿ ಹೇಳಿದರು.

ಪುನೀತ ರಾಜಕುಮಾರ್ ಸ್ವಗೃಹದಲ್ಲಿ ಪುನೀತ್ ಕುಟುಂಬದವರಿಗೆ ಸಾಂತ್ವನ ಹೇಳಿದ ಶ್ರೀಗಳು, ತಂದೆಯ ಹಾದಿಯಲ್ಲಿಯೇ ನಡೆಯುತ್ತಿದ್ದ ನಟ ಪುನೀತ್‌ ರಾಜ್‌ಕುಮಾರ್‌ ಸರಳತೆಯನ್ನು ಮೈಗೂಡಿಸಿಕೊಂಡಿದ್ದರು. ಪುನೀತ್‌ ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಅವರ ಅಭಿನಯ ಜನಮಾನಸದಲ್ಲಿ ಅಚ್ಚಳಿಯದೇ ನಿಂತಿದೆ. ನಾಯಕ ನಟನಾಗಿ ಅನೇಕ ಚಿತ್ರಗಳಲ್ಲಿ ಅಮೋಘವಾಗಿ ಅಭಿನಯಿಸಿ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿದ್ದು ಅಲ್ಲದೆ, ಅನೇಕ ವೃದ್ಧಾಶ್ರಮಗಳಿಗೆ, ಅನಾಥರಿಗೆ, ಗೋಶಾಲೆಗಳಿಗೆ, ಧಾರ್ಮಿಕ ಗುರುಗಳಿಗೆ ಸಹಾಯ ಮಾಡುತ್ತಿದ್ದರು. ಡಾ. ರಾಜಕುಮಾರ ಸಿಂದಗಿ ಶ್ರೀಗಳಿಂದ ಲಿಂಗದಿಕ್ಷೆ ಪಡೆದು ಮಕ್ಕಳಿಗೂ ಮಾರ್ಗದರ್ಶನ ವಿತ್ತವರು, ನನ್ನೊಂದಿಗೆ ಹಲವು ವೇದಿಕೆಯನ್ನು ಹಂಚಿಕೊಂಡಿದ್ದರು ಎಂದು ಸ್ಮರಿಸಿದರು.

ಪುನೀತ್ ರಾಜಕುಮಾರ ಪತ್ನಿ ಶ್ರೀಮತಿ ಅಶ್ವಿನಿ ಸೇರಿದಂತೆ ಕುಟುಂಬ ಸದಸ್ಯರಿಗೆ ಸಾಂತ್ವನದ ಮಾತನಾಡಿದ ಹುಕ್ಕೇರಿ ಶ್ರೀ, ಕನ್ನಡ ಭಾಷೆ, ನೆಲ, ಜಲದ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ಎಲ್ಲರ ಮನಗಳಲ್ಲಿ ನೆಲೆಸಿರುವ ಅಪ್ಪು ಅವರ ನಿಧನದ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ, ಅಭಿಮಾನಿಗಳಿಗೆ ಆ ದೇವರು ಕರುಣಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾವುಕರಾಗಿ ನುಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಾಲ್ಮೀಕಿ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ, ಸಮಾಜಸೇವಕ ವೆಂಕಟೇಶ, ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ (ಯುವ ಘಟಕ ) ಅಧ್ಯಕ್ಷ ಪ್ರಸಾದ್, ಕೆಪಿ ಪರಶಿವ, ಬಾಲಾಜಿ ಸೇರಿದಂತೆ ಇತರರು ಇದ್ದರು.

ಬಟ್ಟೆಯ ಮೇಲಿಂದ ಸ್ಪರ್ಶಿಸಿದರೂ ಲೈಂಗಿಕ ದೌರ್ಜನ್ಯ; ಸುಪ್ರೀಂ ತೀರ್ಪು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button