Latest

ಅಂಧರ ಬಾಳಿಗೆ ಬೆಳಕಾದ ಪುನೀತ್ ರಾಜ್​ಕುಮಾರ್ ಅಭಿಮಾನಿಗಳು

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಸ್ಟಾರ್ ನಟರ ಫಿಲ್ಮ್ ಬಿಡುಗಡೆಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡುವುದು, ಪಟಾಕಿ ಸಿಡಿಸುವುದು, ಘೋಷಣೆ ಕೂಗಿ ಅಭಿಮಾನ ವ್ಯಕ್ತಪಡಿಸುವುದು ಸರ್ವೇ ಸಾಮಾನ್ಯ. ಆದರೆ ಪುನೀತ್ ತಮ್ಮ ಅಭಿಮಾನಿಗಳಿಗೆ ಇಂತಹ ಕೆಲಸಕ್ಕೆ ಬಳಸುವ ದುಡ್ಡಿನಲ್ಲಿ ಏನಾದರೂ ಯಾರಿಗಾದರೂ ಸಹಾಯ ಮಾಡಿ, ಒಳ್ಳೆಯ ಕೆಲಸ ಮಾಡಿ ಎಂದು ಪ್ರಾರ್ಥಿಸುತ್ತಿದ್ದರು.‌ ಹಾಗಾಗಿ ಪ್ರತಿಬಾರಿಯೂ ಅಭಿಮಾನಿಗಳು ದುಂದು ವೆಚ್ಚ ಮಾಡದೆ ಒಳ್ಳೆಯ ಕಾರ್ಯ, ಸಮಾಜಪರ ಕೆಲಸ ಮಾಡುತ್ತಿದ್ದರು.

ಇಂದು ಪುನೀತ್ ಇಲ್ಲದಿದ್ದರೂ ಅಭಿಮಾನಿಗಳು ಪ್ರೀತಿಯಿಂದ ಸಮಾಜಪರ ಕೆಲಸ ಮಾಡುತ್ತಿದ್ದಾರೆ.  ಪುನೀತ್ ಅವರ ಜನ್ಮದಿನದ ಅಂಗವಾಗಿಯೇ ಜೇಮ್ಸ್ ಚಿತ್ರ ಬಿಡುಗಡೆಯಾಗಿದ್ದು, ಹುಬ್ಬಳ್ಳಿಯಲ್ಲಿ ಅಪ್ಪು ಅಭಿಮಾನಿ ಬಳಗ ಮಾತ್ರ ವಿಭಿನ್ನವಾಗಿ ಈ ದಿನ ಆಚರಿಸಿದೆ.

ಹುಬ್ಬಳ್ಳಿಯಲ್ಲಿ ಪುನೀತ್ ರಾಜ್​ಕುಮಾರ್​ ಅಭಿಮಾನಿ ರಾಘವೇಂದ್ರ ವದ್ದಿ ನೇತೃತ್ವದಲ್ಲಿ ರಾಜವಂಶ ಅಭಿಮಾನಿ ಬಳಗ ಸುಮಾರು ನೂರು ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದೆ.‌ ಹುಬ್ಬಳ್ಳಿಯ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸುಮಾರು ನೂರು ಜನರ ಬಾಳಿನಲ್ಲಿ ಹೊಸ ಬೆಳಕು ತುಂಬಿದ್ದಾರೆ.

ಕಣ್ಣಿನ ಶಸ್ತ್ರಚಿಕಿತ್ಸೆಯಿಂದ ನಮ್ಮ ಬದುಕಿನಲ್ಲಿ ಸಹಾಯವಾಗುತ್ತೆ, .ಅಪ್ಪು ಅಭಿಮಾನಿ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಕಣ್ಣಿನ ಚಿಕಿತ್ಸೆ ಮಾಡಿಸಿಕೊಂಡವರು.

Home add -Advt

Related Articles

Back to top button