Latest

ಪ್ರಚೋದನಾಕಾರಿ ಭಾಷಣವೇ ದೆಹಲಿ ದಂಗೆಗೆ ಕಾರಣ – ಶ್ರೀವಾಸ್ತವ್

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ನವದೆಹಲಿಯಲ್ಲಿ ನಡೆದ ಗಲಭೆಗೆ ಪ್ರಚೋದನಾಕಾರಿ ಭಾಷಣವೇ ಪ್ರಮುಖ ಕಾರಣ ಎಂದು ಪೊಲೀಸ್ ಆಯುಕ್ತ ಎಸ್.ಎನ್.ಶ್ರೀವಾಸ್ತವ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರ್ಯಾಲಿಗೆ ಮುನ್ನ ರಾಕೇಶ್ ಶಿಖಾವತ್ ಪ್ರಚೋದನಾಕಾರಿ ಭಾಷಣ ಮಾಡಿದರು. ಭಾಷಣ ಮಾಡಬಾರದೆಂದು ಷರತ್ತು ವಿಧಿಸಿದ್ದೆವು. ಆದರೆ 37 ಷರತ್ತುಗಳನ್ನು ಒಪ್ಪಿಕೊಂಡಿದ್ದರು. ಆಯುಧಗಳನ್ನು ತರುವುದಿಲ್ಲ ಎಂದು ಲಾಂಗ್, ಮಚ್ಚು, ಖಡ್ಗ ಹಿಡಿದು ಬಂದಿದ್ದರು ಎಂದು ಎಸ್.ಎನ್.ಶ್ರೀವಾಸ್ತವ್ ತಿಳಿಸಿದರು.

ಘಟನೆಯಲ್ಲಿ 394 ಪೊಲೀಸರಿಗೆ ಗಾಯಗಳಾಗಿವೆ. ಕೆಲವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟೂ 27 ಎಫ್ಐಆರ್ ದಾಖಲಿಸಲಾಗಿದೆ. 200 ಜನರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.

 

Home add -Advt

Related Articles

Back to top button