ಹಾರ್‌ಕರ್ ಜೀತನೆವಾಲೇಕೊ ಪುಷ್ಕರ್ ಸಿಂಗ್ ಕೆಹೆತೆ ಹೈ… ಚುನಾವಣೆ ಸೋತರೂ ಸಿಎಂ ಆದ ಪುಷ್ಕರ್ ಸಿಂಗ್‌ಗೆ ತರಹೇವಾರಿ ಕಾಮೆಂಟ್ಸ್

ಪ್ರಗತಿ ವಾಹಿ ಸುದ್ದಿ ಡೆಹರಾಡೂನ್

ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಉತ್ತರಾಖಂಡಲ್ಲಿ ಬಿಜೆಪಿ ಬಹುಮತ ಸಾಧಿಸಿದ್ದು ಪುಷ್ಕರ್ ಸಿಂಗ್ ಧಾಮಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ಉತ್ತರಾಖಂಡದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ರಚನೆಯಾಗಿದೆ.

ಆದರೆ ಪುಷ್ಕರ್ ಸಿಂಗ್ ಧಾಮಿ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಸೋಲನುಭವಿಸಿದ್ದಾರೆ. ಸ್ವತಃ ಸೋತಿದ್ದರೂ ಮುಖ್ಯಂತ್ರಿಯಾದ ಪುಷ್ಕರ ಸಿಂಗ್ ಪ್ರಮಾಣ ವಚನದ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ನಾನಾ ಕಾಮೆಂಟ್‌ಗಳು ಹರಿದುಬರುತ್ತಿವೆ.

ಅದರಲ್ಲೂ ಹಾರ್‌ಕರ್ ಜೀತನೆವಾಲೇಕೊ ಬಾಜಿಗರ್ ನಹಿ, ಪುಷ್ಕರ್ ಸಿಂಗ್ ಕೆಹೆತೆಹೈ ಎಂಬ ಕಾಮೆಂಟ್ ಒಂದು ಗಮನ ಸೆಳೆಯುತ್ತಿದೆ. ಅಂತೆಯೇ ಹಲವರು, ಪುಷ್ಕರ್ ಸಿಂಗ್‌ರನ್ನು ಜನ ತಿರಸ್ಕರಿಸಿದ್ದು ಅವರನ್ನು ಮತ್ತೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸಿರುವುದು ಸರಿಯಲ್ಲ ಎಂಬ ಅರ್ಥದಲ್ಲೂ ಕಾಮೆಂಟ್ ಮಾಡಿದ್ದಾರೆ.

Home add -Advt

ಇನ್ನು ಪುಷ್ಕರ್ ಸಿಂಗ್ ಜೊತೆ ಕ್ಯಾಬಿನೆಟ್ ಸಚಿವರಾಗಿ ಸತ್ಪಾಲ್ ಮಹಾರಾಜ್, ಪ್ರೇಮಚಂದ್ ಅಗರ‍್ವಾಲ್, ಗಣೇಶ ಜೋಶಿ, ಧಾನ್ ಸಿಂಗ್ ರಾವತ್, ಸುಬೋದ್ ಉನಿಯಾಲ್, ರೇಖಾ ಆರ್ಯ, ಚಂದನ್ ರಾಮದಾಸ್ ಹಾಗೂ ಸೌರಬ್ ಬಹುಗುಣ ಅವರೂ ಸಹ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಅಪ್ಪು ಕೊನೆಯ ಚಿತ್ರ ಜೇಮ್ಸ್ ಪ್ರದರ್ಶನಕ್ಕೆ ಬಿಜೆಪಿಯಿಂದ ಅಡ್ಡಿ? : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟೀಕರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button