ಅನುಮಾನ ಹುಟ್ಟಿಸಿದ ಅಮೇರಿಕದ ಸೆನೆಟರ್ ಹೇಳಿಕೆ !
ಸೌಥ್ ಕೆರೋಲಿನಾ – ಸೌಥ್ ಕೆರೋಲಿನಾದ ಸೆನೆಟರ್ ಲಿಂಡ್ಸೆ ಗ್ರಹಾಂ ನೀಡಿರುವ ಹೇಳಿಕೆಯೊಂದು ವ್ಯಾಪಕ ಚರ್ಚೆಯಾಗುತ್ತಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ರನ್ನು ಅವರ ಹತ್ತಿರದಲ್ಲೇ ಯಾರಾದರೂ ಕೊಲೆ ಮಾಡಬೇಕು ಎಂದು ಸೆನೆಟರ್ ಹೇಳಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಜಗತ್ತಿನ ಎಲ್ಲಾ ದೇಶಗಳೂ ಇತರ ದೇಶಗಳಲ್ಲಿ ತಮ್ಮ ಗೂಡಚಾರಿಗಳನ್ನು ಇಡುವುದು ಹಜ. ಅದತರಲ್ಲೂ ಶತ್ರು ರಾಷ್ಟ್ರಗಳ ಮೇಲೆ ಇಂಟೆಲಿಜೆನ್ಸ್ ಏಜೆನ್ಸಿಯವರು ಸದಾ ಕಣ್ಣಿಟ್ಟಿರುತ್ತಾರೆ. ಭಾರತದ ಅಜಿತ್ ಧೋವಲ್ ಅವರು ರಾ (ರೀಸರ್ಚ್ ಎಂಡ್ ಅನಾಲಿಸಸ್ ವಿಂಗ್) ಏಜೆಂಟ್ ಆಗಿ ಪಾಕಿಸ್ತಾನದಲ್ಲಿ ಕಾರ್ಯ ನಿರ್ವಹಿಸಿದ್ದ ರೋಚಕ ಇತಿಹಾಸವೇ ಇದೆ.
ಇನ್ನು ಅಮೇರಿಕದ ಸಿಐಎ, ರಷ್ಯಾದ ಕೆಜಿಬಿ ಮೊದಲಾದ ಗೂಡಚಾರ ಸಂಸ್ಥೆಗಳು ವಿಶ್ವ ಮಟ್ಟದಲ್ಲಿ ತಮ್ಮ ತನಿಖೆ, ಮತ್ತು ಗೂಡಾಚಾರ ವಿಭಾಗದಲ್ಲಿನ ಚಾಕಚಕ್ಯತೆಯಿಂದ ಖ್ಯಾತಿ ಪಡೆದಿವೆ. ಅಷ್ಟೇ ಅಲ್ಲ ಸಿಐಎ ರಷ್ಯಾದಲ್ಲೂ ಕೆಜಿಬಿ ಅಮೇರಿಕಾದಲ್ಲೂ ಗುಪ್ತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಹ ಎರಡೂ ದೇಶಗಳಿಗೆ ಗೊತ್ತಿರುವ ವಿಚಾರವೇ, ಆದರೆ ಅವರು ಯಾರು ಎಂಬುದು ಗೊತ್ತಾಗದಿರುವುದೇ ಸಮಸ್ಯೆ.
ಉಕ್ರೇನ್ ಜೊತೆ ರಷ್ಯಾ ಯುದ್ಧ ಪ್ರಾರಂಭಗೊಂಡಮೇಲೆ ಅಮೇರಿಕ ಮತ್ತು ಇಡೀ ಯುರೋಪ್ ಒಕ್ಕೂಟ ರಷ್ಯಾ ವಿರುದ್ಧ ತಿರುಗಿ ಬಿದ್ದಿದೆ. ಈ ನಡುವೆ ಅಮೇರಿಕದಲ್ಲಿದ್ದ ರಷ್ಯಾ ದೂತಾವಾಸದ ಕಚೇರಿಯ ಎಲ್ಲ ಸಿಬ್ಬಂದಿಯನ್ನೂ ಗೂಡಾಚಾರಿಕೆಯ ಅನುಮಾನದ ಮೇಲೆ ವಾಪಸ್ ಕಳುಹಿಸಲಾಗಿದೆ.
ಆದರೆ ಈಗ ಅಮೇರಿಕಾದ ಸೆನೆಟರ್ ಲಿಂಡ್ಸೆ ಗ್ರಹಾಂ ನೀಡಿರುವ ಹೇಳಿಕೆಗೆ ವಿಶ್ವದ ಹಲವು ರಾಷ್ಟ್ರಗಳ ಪ್ರಮುಖರ ಹುಬ್ಬೇರಿಸುವಂತೆ ಮಾಡಿದೆ. ಗ್ರಹಾಂ ನೇರನೇರವಾಗಿ ಹೇಳಿಕೆ ನೀಡಿದ್ದು ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್‌ರನ್ನು ಅವರ ಹತ್ತಿರದ ವ್ಯಕ್ತಿಗಳೇ ಯಾರಾದರೂ ಕೊಲ್ಲಬೇಕು ಎಂಬ ಗ್ರಹಾಂರ ಹೇಳಿಕೆಯನ್ನು ವಿಶ್ವ ಗಂಭೀರವಾಗಿ ಪರಿಗಣಿಸಿದೆ. ಅತ್ಯಂತ ಅಭಿವೃದ್ಧಿಶೀಲ, ವಿಶ್ವದ ದೊಡ್ಡಣ್ಣ ಎಂದೇ ಕರೆಯಲಾಗುವ ಅಮೇರಿಕಾದ ಸೆನೆಟರ್, ಅದರಲ್ಲೂ ರಷ್ಯಾದ ಶತ್ರು ರಾಷ್ಟ್ರದ ಸೆನೆಟರ್ ಒಬ್ಬ ಈ ರೀತಿಯ ಹೇಳಿಕೆ ನೀಡಿರುವುದನ್ನು ಹಗುರವಾಗಿ ಪರಿಗಣಿಸುವಂತೆಯೂ ಇಲ್ಲ.
ಹಾಗಾಗಿ ಪುಟಿನ್ ಆಪ್ತ ಬಳಗದಲ್ಲೇ ಯಾರಾದರೂ ಸಿಐಎ ಏಜೆಂಟ್ ಇದ್ದಾರಾ ? ಅಥವಾ ರಷ್ಯಾದ ಇನ್ಯಾವುದೇ ಶತ್ರು ರಾಷ್ಟ್ರದ ಏಜೆಂಟ್ ಇದ್ದಾರಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಅಥವಾ ಗ್ರಹಾಂ ಅವರು ರಷ್ಯಾ ಉಕ್ರೇನ್ ಮೇಲೆ ಮಾಡಿರುವ ಆಕ್ರಮಣದಿಂದ ಆಕ್ರೋಶಗೊಂಡು ಈ ರೀತಿಯ ಹೇಳಿಕೆ ನೀಡಿದ್ದಾರಾ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಸೆನೆಟರ್ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.
ಲೈಂಗಿಕ ಸಂಬಂಧ ಬೇಡ ಎನ್ನುವುದು ಕ್ರೌರ್ಯ ಎಂದ ಹೈಕೋರ್ಟ್; ವಿಚ್ಛೇದನಕ್ಕೆ ಅಸ್ತು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ