Latest

ಅಮೇರಿಕ, ಇಂಗ್ಲೆಂಡ್ ಧ್ವಜ ಕಿತ್ತೆಸೆದು ಭಾರತದ ಧ್ವಜ ಉಳಿಸಿಕೊಂಡ ರಷ್ಯಾ

ಪರಸ್ಪರ ವಿರೋಧಿ ದೇಶಗಳು ತಲೆ ಬಾಗಿದ್ದು ಕೇವಲ ತಿರಂಗಾಕ್ಕೆ !

 

ಮಾಸ್ಕೋವ್ – ಅತ್ತ ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ವಾಪಸ್ ಬರಲು ಭಾರತದ ರಾಷ್ಟ್ರ ಧ್ವಜ ಸಹಾಯ ಮಾಡಿದೆ. ಭಾರತದ ಧ್ವಜ ಹೊತ್ತ ಬಸ್‌ಗಳನ್ನು ವಿದ್ಯಾರ್ಥಿಗಳನ್ನು ಉಕ್ರೇನ್ ಸೈನಿಕರು ಗೌರವಯುತವಾಗಿ ಕಳಿಸಿದ್ದಾರೆ.

Home add -Advt

ಇನ್ನೊಂದೆಡೆ ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಕೂಡ ತ್ರಿವರ್ಣ ಧ್ವಜಕ್ಕೆ ಗೌರವ ನೀಡಿದೆ. ರಷ್ಯಾದ ಬಾಹ್ಯಾಕಾಶ ರಾಕೇಟ್‌ನಲ್ಲಿದ್ದ ಅಮೇರಿಕ, ಇಂಗ್ಲೆಂಡ್, ಜಪಾನ್, ಜರ್ಮನಿ ಮೊದಲಾದ ದೊಡ್ಡ ದೊಡ್ಡ ರಾಷ್ಟ್ರಗಳ ಧ್ವಜ ಕಿತ್ತೆಸೆಯಲಾಗಿದ್ದು ಭಾರತದ ರಾಷ್ಟ್ರ ಧ್ವಜವನ್ನು ಮಾತ್ರ ಉಳಿಸಿಕೊಂಡಿದೆ.

ಆ ಮೂಲಕ ಪರಸ್ಪರ ಯುದ್ಧ ಮಾಡುತ್ತಿರುವ ಎರಡೂ ರಾಷ್ಟ್ರಗಳು ಗೌರವ ತೋರಿದ ಏಕೈಕ ರಾಷ್ಟ್ರ ಧ್ವಜವಾಗಿ ಭಾರತದ ತಿರಂಗಾ ಅಪಾರ ಗೌರವ ಸಂಪಾದಿಸಿದೆ.

ಅಲ್ಲದೇ ಬೇರೆ ಬೇರೆ ದೇಶಗಳ ರಾಷ್ಟ್ರ ಧ್ವಜವನ್ನು ಕಿತ್ತು ಹಾಕಿ ಭಾರತದ ರಾಷ್ಟ್ರಧ್ವಜವನ್ನು ಮಾತ್ರ ಬಾಹ್ಯಾಕಾಶ ರಾಕೇಟ್‌ನಲ್ಲಿ ಉಳಿಸಿಕೊಂಡಿರುವ ದೃಷ್ಯವನ್ನು ವಿಡಿಯೋ ಚಿತ್ರೀಕರಣ ಸಹ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಅಪ್‌ಲೋಡ್ ಮಾಡಲಾಗಿದ್ದು ವೈರಲ್ ಆಗುತ್ತಿದೆ.

ಪಾಕಿಸ್ತಾನೀಯರ ಪ್ರಾಣ ಉಳಿಸಿದ ಭಾರತದ ರಾಷ್ಟ್ರ ಧ್ವಜ!

Related Articles

Back to top button