Kannada NewsKarnataka NewsLatest

ಪ್ರಶ್ನೆ ಪತ್ರಿಕೆ ಸೋರಿಕೆ: ತನಿಖೆ ಪ್ರಗತಿಯಲ್ಲಿದೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ವಿಶ್ವವಿದ್ಯಾಲಯದ ವ್ಯವಸ್ಥೆಯಿಂದ ಯಾವುದೇ ಪ್ರಶ್ನೆ ಪತ್ರಿಕೆಗಳು ಸೊರಿಕೆಯಾಗುತ್ತಿಲ್ಲ. ಕೆಲವು ಸಮಾಜ ವಿರೋಧಿ ವ್ಯಕ್ತಿಗಳು ಅಂತರ್ಜಾಲದ ಮುಖಾಂತರ ಪರೀಕ್ಷೆಗೆ 15-20 ನಿಮಿಷ ಇರುವಾಗ ಪ್ರಶ್ನೆ ಪತ್ರಿಕೆಯ
ಪ್ರತಿಗಳನ್ನು ಪಡೆದುಕೊಂಡು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹೇಳಿದೆ. 

ಈ ಕುರಿತು ವಿಟಿಯು ಮೌಲ್ಯಮಾಪನ ಕುಲಸಚಿವ ಸತೀಶ್ ಅಣ್ಣಿಗೇರಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಸಕ ನಡೆಯುತ್ತಿರುವ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೊರಿಕೆಯಾಗುತ್ತಿವೆ ಎಂದು ಕೆಲವು  ಮಾಧ್ಯಮಗಳಲ್ಲಿ ನಿರಂತರ ಸುದ್ದಿ ಭಿತ್ತರವಾಗುತ್ತಿರುವುದು ವಿಷಾದನೀಯವಾಗಿದೆ. ಇದರಿಂದ
ವಿಶ್ವವಿದ್ಯಾಲಯದ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ. ವಿಶ್ವವಿದ್ಯಾಲಯದ ವ್ಯವಸ್ಥೆಯಿಂದ ಯಾವುದೇ ಪ್ರಶ್ನೆ ಪತ್ರಿಕೆಗಳು
ಸೊರಿಕೆಯಾಗುತ್ತಿಲ್ಲವೆಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಅದರೊಂದಿಗೆ ಸದರಿ
ವಿಷಯವನ್ನು ಅತ್ಯಂತ ಗಂಬಿ ರವಾಗಿ ಪರಿಗಣಿಸಲಾಗಿದೆ ಎಂದಿದ್ದಾರೆ.
ಕೆಲವು  ತಾಂತ್ರಿಕತೆಯ ಜ್ಞಾನವುಳ್ಳ ಸಮಾಜ ವಿರೋಧಿ ವ್ಯಕ್ತಿಗಳು ವಿಶ್ವವಿದ್ಯಾಲಯದ ಪ್ರಶ್ನೆ ಪತ್ರಿಕೆ ವಿತರಣಾ ವ್ಯವಸ್ಥೆಯನ್ನು ಅಂತರ್ಜಾಲದ ಮುಖಾಂತರ ದುರುಪಯೋಗಪಡಿಸಿಕೊಂಡು ಪ್ರಶ್ನೆ ಪತ್ರಿಕೆಯ
ಪ್ರತಿಗಳನ್ನು ಪಡೆದುಕೊಂಡು ಪರೀಕ್ಷೆಗಳು ಪ್ರಾರಂಭವಾಗುವ ೧೫ ರಿಂದ ೨೦ ನಿಮಿಷಗಳ ಮೊದಲು ಸೊರಿಕೆ ಮಾಡಿ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆತಂಕ ಹುಟ್ಟಿಸುತ್ತಿರುವುದು ವಿಶ್ವವಿದ್ಯಾಲಯದ ಗಮನಕ್ಕೆ ಬಂದಿದೆ.

ಆದರೆ ಪರೀಕ್ಷಾರ್ಥಿ ವಿದ್ಯಾರ್ಥಿಗಳು ಅಷ್ಟೊತ್ತಿಗಾಗಲೇ ಪರೀಕ್ಷಾ ಕೊಠಡಿಯಲ್ಲಿ ಹಾಜರಿರುತ್ತಾರೆ. ಆದ್ದರಿಂದ ಸೊರಿಕೆಯಾಗಿದೆಯೆಂದು ಹೇಳಲ್ಪಡುವ ಪ್ರಶ್ನೆ ಪತ್ರಿಕೆ ವಿದ್ಯಾರ್ಥಿಗಳಿಗೆ ತಲುಪುವುದಾಗಲಿ ಅಥವಾ ಮಾರುಕಟ್ಟೆಯಲ್ಲಿ ಮಾರುವುದಾಗಲಿ ಸಾಧ್ಯವಿರುವುದಿಲ್ಲವೆಂಬ ವಿಷಯವನ್ನು ಪತ್ರಿಕಾ ಹಾಗೂ ಮಾಧ್ಯಮಗಳ ಗಮನಕ್ಕೆ ತರಬಯಸುತ್ತೇವೆ ಎಂದಿದ್ದಾರೆ.
ವಿಶ್ವವಿದ್ಯಾಲಯದ ಪರೀಕ್ಷೆಗಳು ಹಾಗೂ ಪ್ರವೇಶಾತಿ ಪ್ರಕ್ರಿಯೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ವಿಶ್ವವಿದ್ಯಾಲಯದ ಪ್ರತಿಷ್ಠೆಗೆ ಧಕ್ಕೆ ತರುವುದಕ್ಕಾಗಿ ನಡೆಸುತ್ತಿರುವ ಸಂಚು ಇದಾಗಿದೆ.
ಸದರಿ ವಿಷಯದ ಬಗ್ಗೆ ವಿದ್ಯಾರ್ಥಿಗಳಾಗಲಿ ಅಥವಾ ಪಾಲಕರಾಗಲಿ ಆತಂಕ ಅಥವಾ ಭಯಪಡಬಾರದು.   
ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ವಿಷಯವನ್ನು ವಿಶ್ವವಿದ್ಯಾಲಯ ಗಂಭೀರವಾಗಿ ಪರಿಗಣಿಸಿದ್ದು, ವಿಚಾರಣೆ ತೀವ್ರಗೊಳಿಸಲಾಗಿದೆ, ಆದಷ್ಟು ಶೀಘ್ರದಲ್ಲಿ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು. ಅದರ ಜೊತೆಗೆ ಸೈಬರ್ ಕ್ರೈಮ್ ಪೋಲಿಸ್‌ರಿಂದ ತನಿಖೆ ಪ್ರಗತಿ ಹಂತದಲ್ಲಿದೆ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button