*ಉತ್ತರ ಕರ್ನಾಟಕ ಭಾಗದ ಚರ್ಚೆಯೂ ಇಲ್ಲ, ಹಣ ಬಿಡುಗಡೆಯನ್ನೂ ಮಾಡಿಲ್ಲ; ಸರ್ಕಾರದ ವಿರುದ್ಧ ಆರ್.ಅಶೋಕ್ ವಾಗ್ದಾಳಿ*
ನಾಳೆ ಸರ್ಕಾರದ ವಿರುದ್ಧ ಬಿಜೆಪಿಯಿಂದ ಹೋರಾಟ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಅಧಿವೇಶನ ಸಮಾನ್ಯವಾಗಿ ಉತ್ತರ ಕರ್ನಾಟಕ ಸಮಸ್ಯೆ ಚರ್ಚೆ ಮಾಡುವ ಹಾಗೂ ಆ ಭಾಗಕ್ಕೆ ಅಭಿವೃದ್ಧಿ ಕುರಿತು ಯೋಜನೆ, ಹಣ ಬಿಡುಗಡೆ ಮಾಡುವಂತಹ ಅಧಿವೇಶನ.
ಬೆಳಗಾವಿ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚು ಅನುದಾನ ನೀಡುವ ಯೋಜನೆಗಳನ್ನು ಘೋಷಿಸಿದ್ದರು. ಆದರೆ ಈ ಸರ್ಕಾರ ಉತ್ತರ ಕರಾಟಕ ಭಾಗಕ್ಕೆ ಹಣ ಬಿಡುಗಡೆ ಮಾಡುವುದನ್ನು ಬಿಟ್ಟು ಜನರ ಮೇಲೆ ಟ್ಯಾಕ್ಸ್ ಹಾಕುವ ಅಧಿವೇಶನ ಮಾಡಿದೆ. ಕಂದಾಯ ಇಲಾಖೆಯಲ್ಲಿ ಮಗು ದತ್ತುಗೂ ಟ್ಯಾಕ್ಸ್, ಸಾಮಜಿಕ ಕಾರ್ಯ ಚಾರಿಟೆಬಲ್ ಗೂ ಟ್ಯಾಕ್ಸ್, ಲೋನ್ ಗೂ ಟ್ಯಾಕ್ಸ್. ಹೀಗೆ 25-30 ವಿವಿಧ ರೀತಿ ವಿಭಾಗಕ್ಕೆ ಟ್ಯಾಕ್ಸ್ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಅಧಿವೇಶನ ಕರೆದಿರುವುದು ಯಾಕೆ? ಉತ್ತರ ಕರ್ನಾಟಕ ಭಾಗದ ಚರ್ಚೆಗೆ. ಹಣ ಬಿಡುಗಡೆ ಮಾಡಲು. ಆದರೆ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿಲ್ಲ. ಹಣ ಬಿಡುಗಡೆಯೂ ಆಗಿಲ್ಲ. ಕಂದಾಯ ಸಚಿವರು ನಿನ್ನೆ ವಿಧಾನಸಭೆಯಲ್ಲಿ ಬರಿ ಭಾಷಣ ಮಾಡಿದ್ದಾರೆ. ಜಿಲ್ಲಾಧಿಕಾರಿ ಮೀಟಿಂಗ್ ಮಾಡಿದ್ದೇವೆ, ಸಚಿವರ ಮೀಟಿಂಗ್ ಮಾಡಿದ್ದೇವೆ, ಕೇಂದ್ರಕ್ಕೆ ಪತ್ರ ಬರೆದಿದ್ದೇವೆ, ಮೀಟಿಂಗ್ ಮಾಡಿದ್ದೇವೆ ಇದನ್ನೇ ಹೇಳಿದ್ದಾರೆ. ಭಾಷಣದುದ್ದಕ್ಕೂ ಹೇಳಿದ್ದನ್ನೇ ಹೇಳಿ…ಹತ್ತು ಬಾರಿ ಹೇಳಿದ್ದಾರೆ. ಹಣ ಬಿಡುಗಡೆ ಮಾಡಿರುವ ಬಗ್ಗೆ ಒಂದೇ ಒಂದು ಮಾತು ಹೇಳಿಲ್ಲ. ಈ ಅಧಿವೇಶನ ಜನರ, ಬಡವರ ಮೇಲೆ ಬರೆ ಎಳೆಯುವ, ತೆರಿಗೆ ಹಾಕುವ ಅಧಿವೇಶನವಗೈದೆ ಅಷ್ಟೇ ಎಂದು ಕಿಡಿಕಾರಿದರು.
ರಾಜ್ಯದ ಜನತೆಗೆ ಬೇಕಾದ ಯಾವ ಕೆಲಸ ಮಾಡಿಲ್ಲ. ರೈತರ ಸಾಲ ಮನ್ನಾ ಬಗ್ಗೆ ನಾವು ಕೇಳಿದ್ದೆವು. ಅದಕ್ಕೆ ಉತ್ತರವನ್ನೂ ನೀಡಿಲ್ಲ. ಎಕರೆಗೆ 25 ಸಾವಿರ ಪರಿಹಾರ ಕೇಳಿದ್ದುವು ಅದರ ಬಗ್ಗೆ ಸುದ್ದಿ ಎತ್ತಿಲ್ಲ. ಟಾಸ್ಕ್ ಪೋರ್ಸ್ ವಿಚಾರ ಕೇಳಿದ್ದೆವು ಅದಕ್ಕೂ ಉತ್ತರವಿಲ್ಲ. ಜನವಿರೋಧಿ ಈ ಸರ್ಕಾರದ ವಿರುದ್ಧ ನಾಳೆ ಬೆಳಗಾವಿಯಲ್ಲಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ