Karnataka NewsLatestPolitics

*ಕ್ಯಾಮೆರಾ ಮುಂದೆ ಅಧಿಕಾರಿಗಳನ್ನು ಗದರಿಸಿ ರೀಲ್ಸ್ ಮಾಡುವ ನಾಟಕ ಸಾಕು; ರಸ್ತೆ ಗುಂಡಿಗಳ ಬಗ್ಗೆ ರೀಲ್ಸ್ ಮಾಡುವುದು ಯಾವಾಗ? ಸಚಿವ ಕೃಷ್ಣಬೈರೇಗೌಡಗೆ ಆರ್.ಅಶೋಕ್ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ರೀಲ್ಸ್ ಮಾಡುವುದು ಯಾವಾಗ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರೇ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

Home add -Advt

ಬೆಂಗಳೂರಿನ ಜನತೆ ಪತ್ರಿಕೆಗೆ ಕಳುಹಿಸಿರುವ ಈ ನರಕಸದೃಶ ರಸ್ತೆಗುಂಡಿಗಳು ಫೋಟೋಗಳನ್ನು ಒಮ್ಮೆ ಕಣ್ಣು ಬಿಟ್ಟು ನೋಡಿ! ವಿನಾಯಕ ಲೇಔಟ್ ನಾಗರಭಾವಿ, ಮುದ್ದಿನಪಾಳ್ಯ ರಸ್ತೆ, ಜಯನಗರ 8ನೇ ಬ್ಲಾಕ್… ಹೀಗೆ ರಾಜಧಾನಿಯ ಪ್ರತಿ ರಸ್ತೆಯಲ್ಲೂ ಈಗ ‘ಗುಂಡಿಗಳದ್ದೇ ದರ್ಬಾರ್’!

ಬೆಂಗಳೂರನ್ನು “Failed Model” ಎಂದು ಕರೆಯುವ ಮೂಲಕ ಬ್ರ್ಯಾಂಡ್ ಬೆಂಗಳೂರು ನಿರ್ಮಿಸುತ್ತೇವೆ ಎಂದು ಕೊಚ್ಚಿಕೊಳ್ಳುತ್ತಿದ್ದ ನಿಮ್ಮ ಮುಖ್ಯಮಂತ್ರಿಗಳ ಅಸಲಿ ಬಂಡವಾಳವನ್ನ ನೀವೇ ಬಯಲು ಮಾಡಿದ್ದೀರಿ ಎಂದು ಟೀಕಿಸಿದ್ದಾರೆ.

ಬೆಂಗಳೂರಿನ ಇಂದಿನ ದುಸ್ಥಿತಿಗೆ ನೇರ ಹೊಣೆಗಾರರು ನಿಮ್ಮ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಎಂದು ಒಪ್ಪಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದೀರಾ ಕೃಷ್ಣ ಭೈರೇಗೌಡರೇ? ಅಥವಾ ಇದನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿದೀರಾ? ಎಂದು ಕೇಳಿದ್ದಾರೆ.

ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಬೆಂಗಳೂರಿನ ನಾಗರಿಕರ ತೆರಿಗೆ ಹಣ ಬೇಕು, ಆದರೆ ಅವರಿಗೆ ಸುರಕ್ಷಿತ ರಸ್ತೆ ಕೊಡುವ ಯೋಗ್ಯತೆ ಇಲ್ಲ. ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ಉಸ್ತುವಾರಿ ಸಚಿವರ ವೈಫಲ್ಯದಿಂದಾಗಿ ಜನರ ದಿನನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಇದೆ.

ಕ್ಯಾಮೆರಾ ಮುಂದೆ ಅಧಿಕಾರಿಗಳನ್ನು ಗದರಿಸಿ ರೀಲ್ಸ್ ಮಾಡುವ ನಾಟಕ ಸಾಕು ಮಾಡಿ, ಮೊದಲು ರಸ್ತೆಗಿಳಿದು ಈ ಗುಂಡಿಗಳನ್ನು ಮುಚ್ಚಿಸಿ. ಇಲ್ಲದಿದ್ದರೆ ಬೆಂಗಳೂರಿನ ಜನ ನಿಮಗೆ ತಕ್ಕ ಪಾಠ ಕಲಿಸುವ ದಿನ ಬಹಳ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.


Related Articles

Back to top button