
https://youtu.be/YkqiWRosunc
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲರ ಹೆಸರಿನಲ್ಲಿ ಅವರ ಅಭಿಮಾನಿಗಳು ಸ್ಥಾಪಿಸಿರುವ ಶಂಕರಗೌಡ ಪಾಟೀಲ ಪ್ರತಿಷ್ಠಾನದಿಂದ ಸೋಮವಾರ ವಿವಿಧ ಪರಿಹಾರಗಳನ್ನು ವಿತರಿಸಲಾಯಿತು.

ಅಪಘಾತದಲ್ಲಿ ಮೃತರಾದ ಕಾರ್ಮಿಕರ ಪತ್ನಿಯರಿಗೆ ಹಾಗೂ ಸಹಜ ಸಾವಿಗೀಡಾದ ಅಸಂಘಟಿತ ಕಾರ್ಮಿಕರ ಕುಂಟುಂಬಕ್ಕೆ ಕಾರ್ಮಿಕ ಕಲ್ಯಾಣ ನಿಧಿಯಿಂದ ಪರಿಹಾರ ನೀಡಲಾಯಿತು.
ಹಂದಿಗನೂರಿನ ವಿಷ್ಣು ಯಲ್ಲಪ್ಪ ಸುತಾರ , ಜಾಫರವಾಡಿಯ ಬಾಬು ಯಲ್ಲಪ್ಪ ಪಾಟೀಲ, ಕಲ್ಲೋಳಿಯ ಹನುಮಂತ ಬಸಪ್ಪ ಹಟ್ಟಿಗೌಡರ್, ನಂದಗಾಂವ್ (ಅಥಣಿ) ನ ಮೋಹನ್ ಮಾರುತಿ ರಾಜಮಾನೆ, ನಂದಗಾಂವ್ (ಖಾನಾಪುರ) ನ ನಾಮದೇವ ತುಕಾರಾಮ ಗಾವಡೆ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಯಿತು.

ಪ್ರತಿಷ್ಟಾನದಿಂದ 10 ಸಾವಿರ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುತ್ತಿದೆ. 200 ಜನರಿಗೆ 1 ಕೋಟಿ ರೂ,ಗಳಷ್ಟು ವಿವಾಹಕ್ಕೆ ನೆರವು ನೀಡಲಾಗಿದೆ. ಹಲವರಿಗೆ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ನೀಡಲಾಗಿದೆ. ಒಂದೇ ವರ್ಷದಲ್ಲಿ 3 ಕೋಟಿ ರೂ.ಗಳಷ್ಟು ನೆರವು ನೀಡಲಾಗಿದೆ. ಕಳೆದ 10 ವರ್ಷದಲ್ಲಿ 10 ಕೋಟಿ ರೂ.ಗಳಿಗಿಂತ ಹೆಚ್ಚು ನೆರವು ವಿತರಿಸಲಾಗಿದೆ. ಫಲಾನುಭವಿಗಳಿಂದ ಒಂದೇ ಒಂದು ರೂ. ಕೂಡ ಖರ್ಚು ಮಾಡಿಸುತ್ತಿಲ್ಲ ಎಂದು ಶಂಕರಗೌಡ ಪಾಟೀಲ ತಿಳಿಸಿದರು.
ಪ್ರತಿಷ್ಠಾನಕ್ಕೆ 60 ಸಾವಿರ ಜನ ಸದಸ್ಯರಿದ್ದಾರೆ. ಅವರ ಸಂಕಷ್ಟಕ್ಕೆ 2008ರಿಂದ ನೆರವು ನೀಡಲಾಗುತ್ತಿದೆ. ಅರ್ಜಿ ಶುಲ್ಕವನ್ನು ಕೂಡ ಅವರಿಂದ ಪಡೆಯುತ್ತಿಲ್ಲ ಎಂದು ಪ್ರತಿಷ್ಠಾನದ ಅಧ್ಯಕ್ಷ ಎನ್.ಆರ್.ಲಾತೂರ್ ತಿಳಿಸಿದರು.
ಶಿವಾಜಿ ಕಾಗಣಿಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.