Kannada News

ಇಂದು 87 ಸಾವು, ಬೆಳಗಾವಿ, ಉತ್ತರ ಕನ್ನಡದಲ್ಲಿ ತಲಾ 64 ಜನರಿಗೆ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು  – ರಾಜ್ಯದಲ್ಲಿ ಇಂದು 2496 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 87 ಜನರು ಇಂದು ಸಾವಿಗೀಡಾಗಿದ್ದಾರೆ.

ಬೆಂಗಳೂರಿನಲ್ಲಿ 1267 ಜನರಿಗೆ ಸೋಂಕು ಪತ್ತೆಯಾಗಿದೆ. 56 ಜನರು ಸಾವಿಗೀಡಾಗಿದ್ದಾರೆ.

Home add -Advt

ಇಂದು ಮೈಸೂರಲ್ಲಿ 125, ಕಲಬುರಗಿ 121, ಧಾರವಾಡ 100, ಬಳ್ಳಾರಿ 99, ಕೊಪ್ಪಳ 98, ದಕ್ಷಿಣ ಕನ್ನಡ 91, ಬಾಗಲಕೋಟೆ 78 ಜನರಿಗೆ ಸೋಂಕು ಪತ್ತೆಯಾಗಿದೆ.

ಉಡುಪಿ 73, ಬೆಳಗಾವಿ, ಉತ್ತರ ಕನ್ನಡ ತಲಾ 64, ವಿಜಯಪುರ 52, ತುಮಕೂರು 47, ಬೀದರ್ 42, ಮಂಡ್ಯ 38, ರಾಯಚೂರು 25, ದಾವಣಗೆರೆ 17, ಬೆಂಗಳೂರು ಗ್ರಾಮಾಂತರ 14 ಜನರಿಗೆ ಸೋಂಕು ಪತ್ತೆಯಾಗಿದೆ.

ಚಿಕ್ಕಬಳ್ಳಾಪುರ 13, ಕೋಲಾರ 11, ಕೊಡಗು, ಶಿವಮೊಗ್ಗ, ಚಿತ್ರದುರ್ಗ ತಲಾ 10, ಗದಗ 9, ಚಾಮರಾಜನಗರ 8, ಹಾಸನ 4, ಚಿಕ್ಕಮಗಳೂರು 3, ಯಾದಗಿರಿ 2, ರಾಮನಗರ 1 ಪ್ರಕರಣ ಪತ್ತೆಯಾಗಿದೆ.

ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 44077. ಒಟ್ಟೂ ಸಾವಿನ ಸಂಖ್ಯೆ 842.

Related Articles

Back to top button