ಸ್ವಯಂ ಔಟ್ (ರಿಟಾಯರ್ ಔಟ್) ಘೋಷಿಸಿಕೊಂಡ ಕುರಿತು ಮೌನ ಮುರಿದ ಆರ್. ಅಶ್ವಿನ್

ಪ್ರಗತಿ ವಾಹಿನಿ ಸುದ್ದಿ ಮುಂಬೈ – 

ಭಾನುವಾರ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸುಪರ್ ಜಾಯಿಂಟ್ಸ್ ನಡುವಿನ ಪಂದ್ಯದಲ್ಲಿ ಆರ್‌ಆರ್ ತಂಡದ ಬ್ಯಾಟ್ಸ್‌ಮನ್ ಆರ್. ಅಶ್ವಿನ್ ಸ್ವೈ ಔಟ್ ಘೋಷಿಸಿಕೊಂಡು ಹೊರನಡೆದ ಕಾರಣವನ್ನು ಬಹಿರಂಗಪಡಿಸಿದ್ದಾರೆ.

Home add -Advt

ಕ್ರಿಕೇಟ್ ಕೂಡ ಫುಟ್‌ಬಾಲ್‌ನಂತೆ ಒಂದು ತಂಡದ ಆಟ, ಆದರೆ ಆಟಗಾರರೂ ಸೇರಿದಂತೆ ಹೆಚ್ಚಿನವರು ಈ ಸಂಗತಿಯನ್ನು ಮರೆತುಬಿಡುತ್ತೇವೆ. ವಯುಕ್ತಿಕ ದಾಖಲೆಗಳು, ಸ್ಕೋರ್‌ಗಳಿಗಿಂತ ತಂಡದ ಗೆಲವು ಮುಖ್ಯ ಹಾಗಾಗಿ ಕೊನೇಯ ಓವರ್‌ನಲ್ಲಿ ನಾನು ರಿಟಾಯರ್ ಔಟ್ ಘೋಷಿಸಿಕೊಂಡೆ ಎಂದು ಆರ್. ಅಶ್ವಿನ್ ತಿಳಿಸಿದ್ದಾರೆ.

ಅಶ್ವಿನ್ ಅವರ ಈ ನಿರ್ಧಾರ ಅತ್ಯಂತ ಸೂಕ್ತವಾಗಿತ್ತು ಎಂಬುದು ಪಂದ್ಯದ ಫಲಿತಾಂಶದಿಂದ ಸಾಬೀತಾಗಿದೆ. ಅಶ್ವಿನ್ ೧೯ನೇ ಓವರ್‌ನಲ್ಲಿ ರಿಟಾಯರ್ ಔಟ್ ಘೋಷಿಸಿಕೊಂಡು ಹೊರನಡೆದರು. ಈ ವೇಳೆ ಅವರು ೨೩ ಬಾಲ್‌ಗಳಿಗೆ ೧೮ ರನ್ ಬಾರಿಸಿದ್ದರು. ನಂತರ ಬಂದ ರಿಯಾನ್ ಪರಾಗ್ ೪ ಬಾಲ್‌ಗಳಲ್ಲಿ ೮ ರನ್ ಸಿಡಿಸಿದರು. ತಂಡದ ಮೊತ್ತ ೧೬೫ಕ್ಕೆ ಏರಲು ಕಾರಣವಾಯಿತು. ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಲಕ್ನೋ ಸೂಪರ್ ಜಾಯಿಂಟ್ಸ್ ವಿರುದ್ಧ ೩ ರನ್‌ಗಳ ಗೆಲುವು ಸಾಧಿಸಿತು.

ಸ್ವತಃ ಔಟ್ ಘೋಷಿಸಿಕೊಂಡು ಹೊರನಡೆದ ಆರ್. ಅಶ್ವಿನ್: ಐಪಿಎಲ್‌ನಲ್ಲೊಂದು ಅಚ್ಚರಿಯ ವಿದ್ಯಮಾನ

Related Articles

Back to top button