ಪ್ರಗತಿವಾಹಿನಿ ಸುದ್ದಿ: ಟೀಂ ಇಂಡಿಯಾ ಖ್ಯಾತ ಸ್ಪಿನ್ನರ್ ಆರ್.ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
ಬ್ರಿಸ್ಬೇನ್ ನಲ್ಲಿ ನಡೆದ ಗಾಬಾ ಟೆಸ್ಟ್ ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಜೊತೆ ಸುದ್ದಿಗೋಷ್ಠಿ ನಡೆಸಿದ ಆರ್.ಅಶ್ವಿನ್, ನಿವೃತ್ತಿ ಘೋಷಿಸಿದರು. ನನ್ನಲ್ಲಿ ಇನ್ನೂ ಸ್ವಲ್ಪ ಕ್ರಿಕೆಟ್ ಉಳಿದಿದೆ. ಅದನ್ನು ನಾನು ಕ್ಲಬ್ ಕ್ರಿಕೆಟ್ ನಲ್ಲಿ ಮುಂದುವರೆಸುತ್ತೇನೆ. ಇದು ಟೀಂ ಇಂಡಿಯಾ ಜೊತೆಗಿನ ನನ ಕೊನೆಯ ದಿನ. ನನ್ನ ಸಹ ಆಟಗಾರರಿಗೆ ಹಾಗೂ ಬಿಸಿಸಿಐಗೆ ಅಧ್ಯನ್ಯವಾದಗಳು ಎಂದು ಭಾವುಕರಾಗಿ ನುಡಿದಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ್ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು ಇವರೆಕ್ಲ್ಲರ ಸಹಕಾರದಿಂದ ನಾನು ವಿಕೆಟ್ ಕಬಳಿಸಿದ್ದೇನೆ. ಹಾಗೂ ನಮ್ಮೊಂದಿಗೆ ಅತ್ಯುತ್ತಮವಾಗಿ ಆಡಿದ ಆಸ್ಟ್ರೇಲಿಯಾ ತಂಡಕ್ಕೂ ಧನ್ಯವಾದಗಳು ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ